ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ- ಮಾಜಿ ಸಿಎಂ ಬಿಎಸ್ ವೈ.

ಹಾನಗಲ್, ಅಕ್ಟೋಬರ್,22,2021(www.justkannada.in): ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಹಾನಗಲ್ ಸಿಂದಗಿ ಉಪಚುನಾವಣೆ ಹಿನ್ನೆಲೆ ಘಟಾನುಘಟಿ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ ಇಳಿದಿದ್ದಾರೆ. ವಿಪಕ್ಷದಿಂದ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಚಾರ ನಡೆಸುತ್ತಿದ್ದರೇ, ಇತ್ತ ಆಡಳಿತ ಪಕ್ಷದಿಂದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ. ಈ ಬಗ್ಗೆ ಕಾಂಗ್ರೆಸ್ ಸ್ನೇಹಿತರೇ ನಿಮ್ಮ ಮೊಮ್ಮಕ್ಕಳಿಗೂ ಈಗಲೇ ತಿಳಿಸಿಬಿಡಿ. ಅಲ್ಲದೇ ಬಿಜೆಪಿ ಪಕ್ಷ ಸೇರುವಂತೆ ತಿಳಿಸಿ ಬಿಡಿ ಎಂದು ಲೇವಡಿ ಮಾಡಿದರು.

ಹಾಗೆಯೇ ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದರೇ  ಇತ್ತ ವಿರೋಧ ಪಕ್ಷ ಮಾತ್ರ ಅವರನ್ನು ವಿರೋಧಿಸುತ್ತಿದೆ. ಮೋದಿಯವರನ್ನು ವಿರೋಧಿಸುವವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ  ಎಂದು ಎಚ್ಚರಿಕೆ ನೀಡಿದರು.

Key words: coming days- Congress- will be- without –address- Former CM- BS Yeddyurappa