ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ ಮೂವರು ಶಾಸಕರು.

ಬೆಂಗಳೂರು,ನವೆಂಬರ್,6,2021(www.justkannada.in): ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಒಳಚರಂಡಿ ಸಮಸ್ಯೆ ತೀವ್ರವಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಮೂವರು ಶಾಸಕರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚಿಸಿದರು.

ಭೇಟಿಯಾದ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಸಿವಿ ರಾಮನ್ ನಗರ ಶಾಸಕ ರಘು ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿ ತಮ್ಮ ಕ್ಷೇತ್ರದ ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದರು. ಚರಂಡಿ ದುರಸ್ತಿ, ರಸ್ತೆಗುಂಡಿಗಳ ದುರಸ್ತಿ ಮಾಡಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಮಳೆ ನಿಂತ ಬಳಿಕ ದುರಸ್ತಿ ಕಾರ್ಯ ಶುರು ಮಾಡಲಾಗುತ್ತದೆ.  1 ಸಾವಿರ ಕೋಟಿ ಮೊತ್ತದ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಮೂವರು ಶಾಸಕರಿಗೆ ಭರವಸೆ ನೀಡಿದರು.

Key words: three- MLA-Meet-CM Basavaraja Bommai-bangalore