ಜಿಲೆಟಿನ್ ಸ್ಪೋಟ ಕೇಸ್ ನಲ್ಲಿ ಯಾರೇ ಆರೋಪಿಗಳಿದ್ದರೂ ತಕ್ಕ ಶಿಕ್ಷೆ- ಗಣಿ ಸಚಿವ ಮುರುಗೇಶ್ ನಿರಾಣಿ…

ಶಿವಮೊಗ್ಗ,ಜನವರಿ,22,2021(www.justkannada.in):  ಶಿವಮೊಗ್ಗದ ಹುಣಸೋಡು ಬಳಿ ಗಣಿ ಪ್ರದೇಶದಲ್ಲಿ ಸಂಭವಿಸಿದ ಜಿಲೆಟಿನ್ ಸ್ಪೋಟ ಪ್ರಕರಣದಲ್ಲಿ ಯಾರೇ ಆರೋಪಿಗಳಿದ್ದರೂ ತಕ್ಕ ಶಿಕ್ಷೆ ನೀಡಲಾಗುತ್ತದೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.jk

ಘಟನಾ ಸ್ಥಳ ಹುಣಸೋಡಿಗೆ ಗಣಿ ಸಚಿವ ಮುರುಗೇಶ್ ನಿರಾಣಿ  ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ಸ್ಥಿತಿಗತಿ ಕುರಿತು  ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಈ ಬಗ್ಗೆ  ಸಿಎಂ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಒಂದು ಸಮಿತಿ ರಚನೆ ಮಾಡುತ್ತೇವೆ. ಪ್ರಕರಣದಲ್ಲಿ ಯಾರೇ ಆರೋಪಿಗಳಿದ್ದರೂ ತಕ್ಕ ಶಿಕ್ಷೆ ನೀಡುತ್ತೇವೆ ಎಂದರು.

anyone-convicted-gelatin-blast-case-punished-minister-murugesh-nirani
ಕೃಪೆ-internet

ಸ್ಪೋಟಕ ರಾಜ್ಯಕ್ಕೆ ಹೇಗೆ ಬಂತು. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಘಟನೆಯಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುತ್ತದೆ  ಎಂದು ತಿಳಿಸಿದರು.

Key words: Anyone- convicted – gelatin blast case –punished-Minister-Murugesh Nirani.