ಬೀದರ್ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಸಿಎಂ ಬಿಎಸ್ ಯಡಿಯೂರಪ್ಪ…

ಬೀದರ್ ,ಫೆ,7,2020(www.justkannada.in): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಉಡಾನ್’ ಯೋಜನೆಯಡಿ ಟರ್ಬೊ ಮೇಘಾ ಏರ್‌ವೇಸ್‌ ಬೆಂಗಳೂರು ಮತ್ತು ಬೀದರ್ ನಡುವಿನ ವೈಮಾನಿಕ ಸೇವೆಗೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದರು.

ಉಡಾನ್’ ಯೋಜನೆಯಡಿ ಟರ್ಬೊ ಮೇಘಾ ಏರ್‌ವೇಸ್‌ ಬೆಂಗಳೂರು ಮತ್ತು ಬೀದರ್ ನಡುವೆ ವೈಮಾನಿಕ ಸೇವೆ ಇಂದಿನಿಂದ ಪ್ರಾರಂಭಿಸುತ್ತಿದೆ.  ಮೊದಲಿಗೆ ಬೀದರ್​​ನ ವಿಮಾಣ ನಿಲ್ದಾಣ ಲೋಕಾರ್ಪಣೆ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ ನಂತರ  ಬೆಂಗಳೂರು–ಬೀದರ್ ವೈಮಾನಿಕ ಸೇವೆಗೆ ಚಾಲನೆ ನೀಡಿದರು.

ಸಿಎಂ ಯಡಿಯೂರಪ್ಪ ಬೆಳಗ್ಗೆ ಬೆಂಗಳೂರಿನಿಂದ ಟ್ರೂಜೆಟ್ ವಿಮಾನದಲ್ಲಿ ಹೊರಟು 11.30ಕ್ಕೆ ಬೀದರ್ ಏರ್​ಪೋರ್ಟ್​ಗೆ ಬಂದಿಳಿದ ಸಿಎಂ ಬಿಎಸ್ ವೈ. ಬಳಿಕ ಇಲ್ಲಿಂದ ಆರಂಭವಾಗುತ್ತಿರುವ ನಾಗರಿಕ ವಿಮಾನ ಸೇವೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ,ಬೀದರ್ ಜನತೆಯ ವಿಮಾನ ಪ್ರಯಾಣದ ಕನಸು ನನಸಾಗಿದೆ. ಬೆಂಗಳೂರಿನಿಂದ ಬೀದರ್ ಗೆ ಬರಬೇಕಾದರೇ 12 ಗಂಟೆ ಪ್ರಯಾಣ. ಆದರೆ ವಿಮಾನದಲ್ಲಿ 1 ಗಂಟೆ 40 ನಿಮಿಷಕ್ಕೆ ಬೀದರ್ ಗೆ ತಲುಪಬಹುದು. ಇದರಿಂದ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದರು.

Key words: CM BS Yeddyurappa -inaugurates –Bidar- New Airport