ಹೆಚ್.ಡಿ ಕುಮಾರಸ್ವಾಮಿ ಸೀರಿಯಸ್ ರಾಜಕಾರಣಿ ಅಲ್ಲ-ಸಚಿವ ಶ್ರೀರಾಮಲು ಟಾಂಗ್…

ಚಿಕ್ಕಮಗಳೂರು,ಫೆ,7,2020(www.justkannada.in):  ಎಚ್. ಡಿ ಕುಮಾರಸ್ವಾಮಿ  ಸಿರೀಯಸ್ ರಾಜಕಾರಣಿಯೇ ಅಲ್ಲ, ಕುಮಾರಸ್ವಾಮಿ ಕೀಳು ಮಟ್ಟದ ಪದಬಳಕೆ ಮಾಡುತ್ತಾರೆ. ಅವರ ಭಾಷೆಯೇ ಬೇರೆ ನನ್ನ ಭಾಷೆಯೇ ಬೇರೆ ಎಂದು ಹೆಚ್.ಡಿಕೆಗೆ ಆರೋಗ್ಯ ಸಚಿವ ಶ್ರೀರಾಮುಲು ಟಾಂಗ್ ನೀಡಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಹೆಚ್.ಡಿಕೆ ಗಂಭೀರ ರಾಜಕಾರಣಿ ಅಲ್ಲ. ನಾನು ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿಲ್ಲ. ಯಾರ ಮನೆ ಯಾರು ಹಾಳು ಮಾಡಿದ್ದಾರೆಂದು ಜನಕ್ಕೆ ಗೊತ್ತಿದೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ  ಎಂದು ಕಿಡಿಕಾರಿದರು.

ಕೊರೋನ ವೈರಸ್ ಬಗ್ಗೆ ಯಾವುದೇ ಆತಂಕ ಬೇಡ. ರಾಜ್ಯದ 97 ಮಂದಿ ರಕ್ತ  ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 68 ಮಂದಿಯ ರಕ್ತ ಪರೀಕ್ಷೆಯ ವರದಿ ಬಂದಿದೆ. ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಸೋಂಕು ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಕೇರಳದಿಂದ ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Key words: HD Kumaraswamy – not – Serious politician-Minister- Sriramalu -chikkamagalore