ವಿವಿಧ ಸಂಘಟನೆಗಳ ಜತೆ ಚರ್ಚಿಸಿ ಸೆ.25ಕ್ಕೆ ಭಾರತ್ ಬಂದ್ ಬಗ್ಗೆ ತೀರ್ಮಾನ- ಕೋಡಿಹಳ್ಳಿ ಚಂದ್ರಶೇಖರ್…

ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ರೈತ ವಿರೋಧಿ ಬಿಲ್ ಖಂಡಿಸಿ ಸೆ.25ಕ್ಕೆ ಭಾರತ್ ಬಂದ್ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರೈತರ ಪ್ರತಿಭಟನೆಗೆ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಗಳು ರೈತರಿಗೆ ಮಾರಕ. ಈ ಮೂಲಕ ರೈತರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನವಾಗುತ್ತಿದೆ. ಜತೆಗೆ ಭೂ ಸುಧಾರಣಾ ಕಾಯ್ದೆ ತಿದ್ಧುಪಡಿ ಜಾರಿ ಮಾಡಿ ಕಾರ್ಪೋರೇಟ್ ವಲಯ ಬೆಳೆಸಲು ಮುಂದಾಗಿದೆ. ಹೀಗಾಗಿ ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.anti-farmer-bill-protest-sep-5-decide-farmer-leader-kodihalli-chandrashekar

ಹಾಗೆಯೇ ರೈತ ವಿರೋಧಿ ಬಿಲ್ ಖಂಡಿಸಿ ಸೆಪ್ಟಂಬರ್ 25ಕ್ಕೆ ಭಾರತ್ ಬಂದ್ ಬಗ್ಗೆ ವಿವಿಧ ಸಂಘಟನೆಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

Key words: Anti-farmer- bill-protest-sep 5- Decide-farmer leader- Kodihalli chandrashekar