ಫಾಜಿಲ್, ಮಸೂದ್ ಹತ್ಯೆ ಕೇಸ್ ತನಿಖೆಯಲ್ಲಿ ತಾರತಮ್ಯ ಆರೋಪ: ಮಂಗಳೂರಿನಲ್ಲಿ ಪ್ರತಿಭಟನೆ.

ಮಂಗಳೂರು,ಸೆಪ್ಟಂಬರ್,16,2022(www.justkannada.in):  ಫಾಜಿಲ್, ಮಸೂದ್ ಹತ್ಯೆ ಕೇಸ್ ತನಿಖೆಯಲ್ಲಿ ಸರ್ಕಾರ  ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ  ಮಂಗಳೂರಿನಲ್ಲಿ ಮುಸ್ಲೀಂ ಐಕ್ಯಾತಾ ವೇದಿಕೆ ಪ್ರತಿಭಟನೆ ನಡೆಸಿತು.

ಮಂಗಳೂರು ಕ್ಲಾಕ್ ಟವರ್ ಬಳಿ ಮುಸ್ಲೀಂ ಐಕ್ಯಾತಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.  ಪ್ರವೀಣ್ ನೆಟ್ಟಾರು ಹತ್ಯೆಯಾದಾಗ  ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಲಕ್ಷ ಪರಿಹಾರ ನೀಡಿತ್ತು. ಆದರೆ ಮಸೂದ್, ಫಾಜಿಲ್ ಕುಟುಂಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ಈ ಇಬ್ಬರ  ನಿವಾಸಕ್ಕೆ ಜಿಲ್ಲಾಧಿಕಾರಿಯೂ ಭೇಟಿ ನೀಡಿಲ್ಲ.  ಮಸೂದ್ ಫಾಜಿಲ್ ಕುಟುಂಬಕ್ಕೆ  ಸಾಂತ್ವನ ಹೇಳಿಲ್ಲ.

ಈ ಮೂಲಕ ಸರ್ಕಾರ ತನಿಖೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲೀಂ ಐಕ್ಯಾತಾ ವೇದಿಕೆ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

Key words: Allegation – discrimination – Fazil- Masood -murder case- investigation-Protest