ಭಾರತ್ ಜೋಡೋ ಯಾತ್ರೆಗೆ ಎಲ್ಲರೂ ಕೆಲಸ ಮಾಡಬೇಕು: ಕಾರ್ಯಕರ್ತರು, ನಾಯಕರಿಗೆ ಡಿಕೆ ಶಿವಕುಮಾರ್ ವಾರ್ನಿಂಗ್.

ಬೆಂಗಳೂರು,ಸೆಪ್ಟಂಬರ್,16,2022(www.justkannada.in):  ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲೂ 21 ದಿನಗಳ ಕಾಲ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಪಕ್ಷದ ನಾಯಕರು ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿರುವ ಡಿ.ಕೆ ಶಿವಕುಮಾರ್,  ಭಾರತ್ ಜೋಡೋ ಯಾತ್ರೆಗೆ ಎಲ್ಲರೂ ಕೆಲಸ ಮಾಡಬೇಕು.  ಕೆಲಸ ಮಾಡಿದ್ರೆ ಮಾತ್ರ ಕಂಟ್ಯೂನ್ಯೂ ಆಗುತ್ತೀರಾ. ವಹಿಸಿದ ಕೆಲಸ ಮಾಡದವರಿಗೆ ರೆಸ್ಟ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕರು ಜೋಡೋ ಯಾತ್ರೆಯನ್ನ ಲೈಟಾಗಿ ತೆಗೆದುಕೊಳ್ಳಬೇಡಿ. ಸಭೆಯಲ್ಲಿ ಏನು ಹೇಳಿದ್ದೇವೂ ಅದನ್ನ ಮಾಡಿ.  ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಲ್ಲವನ್ನೂ ಗಮನಿಸುತ್ತಿದ್ದಾರೆ.  ಎಲ್ಲಾ ಶಾಸಕರು ಭಾರತ್ ಜೋಡೋ ಯಾತ್ರೆಗೆ ಬರಬೇಕು.  ಬಾಲ್ ನಿಮ್ಮ ಕೋರ್ಟ್ ನಲ್ಲಿದೆ. ಜೋಡೋಯಾತ್ರೆ ಮಾರ್ಗದಲ್ಲಿ ನಿಮ್ಮ ಫೋಟೊ ಹಾಕಿ ಎಂದು ಡಿ.ಕೆ ಶಿವಕುಮಾರ್ ಮುಖಂಡರಿಗೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

Key words: Everyone – work – Bharat Jodo Yatra-DK Shivakumar -warning