ಅಗ್ನಿಪಥ ಯೋಜನೆ ಸಮರ್ಥಿಸಿಕೊಂಡ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವೆಲ್.

ನವದೆಹಲಿ,ಜೂನ್,21,2022(www.justkannada.in):  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿ ಪಥ್ ಯೋಜನೆಯನ್ನ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವೆಲ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅಜಿತ್ ದೋವೆಲ್, ಅಗ್ನಿಪಥ್ ಯೋಜನೆ  ಗೇಮ್ ಚೇಂಜರ್.  ಅಗ್ನಿ ಪಥ್ ಯೋಜನೆ ಭಾರತದ ಬಲಿಷ್ಟ ಯೋಜನೆ. ನಾವು ಭವಿಷ್ಯದ ಬಗ್ಗೆ ಯೋಚಿಸಬೇಕು. ಭಾರತದ ಭದ್ರತೆಗೆ ಪ್ರಧಾನಿ ಆದ್ಯತೆ ನೀಡಿದ್ದಾರೆ. ಯೋಜನೆಯಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ . ರೆಜಿಮೆಂಟ್ ವ್ಯವಸ್ಥೆ ನಿಲ್ಲಬೇಕು. ಸೈನ್ಯಕ್ಕೆ ಚಾಣಾಕ್ಷ ಯುವಪಡೆಯ ಅವಶ್ಯಕತೆ ಇದೆ ಎಂದು ನುಡಿದರು.

ಪ್ರಸ್ತುತ ಯುಗದಲ್ಲಿ ಯುದ್ಧವು ಬದಲಾಗುತ್ತಿದೆ ಮತ್ತು ‘ಸಂಪರ್ಕರಹಿತ’ ಸಂಘರ್ಷವಾಗಿ ಬದಲಾಗುತ್ತಿದೆ, ಅದಕ್ಕಾಗಿಯೇ ಭಾರತವು ನಾಳೆಗೆ ಸಿದ್ಧತೆ ನಡೆಸಬೇಕಾಗಿದೆ. ಅಗ್ನಿಪಥ್ ಸ್ವತಃ ಒಂದು ಸ್ವತಂತ್ರ ಯೋಜನೆಯಲ್ಲ. 2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ, ಭಾರತವನ್ನು ಹೇಗೆ ಸುರಕ್ಷಿತ ಮತ್ತು ಬಲಶಾಲಿಯನ್ನಾಗಿ ಮಾಡುವುದು ಎಂಬುದು ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು. ಅದಕ್ಕೆ ಅನೇಕ ಮಾರ್ಗಗಳು, ಅನೇಕ ಹೆಜ್ಜೆಗಳು ಬೇಕಾಗಿದ್ದವು- ಅವುಗಳಲ್ಲಿ ಅನೇಕವು’ ಎಂದು ಅಜಿತ್ ದೋವಲ್ ಹೇಳಿದರು.

Key words: agnipath Project- Game Changer-National -Security -Advisor- Ajit Dowell.