ಜಂಪ್ ಮಾಡುವ ವೇಳೆ ನಟ ದಿಗಂತ್ ಬೆನ್ನುಮೂಳೆಗೆ ಬಲವಾದ ಪೆಟ್ಟು: ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್.

ಗೋವಾ,ಜೂನ್,21,2022(www.justkannada.in):  ಫ್ಯಾಮಿಲಿ ಜೊತೆ ಗೋವಾಗೆ ಟ್ರಿಪ್ ಗೆ ಹೋಗಿದ್ಧ ನಟ ದೂತ್ ಪೇಡಾ ದಿಂಗತ್  ಸಮುದ್ರ ತಟದಲ್ಲಿ ಜಂಪ್ ಮಾಡುವ ವೇಳೆ ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ  ನೀಡಲಾಗಿದ್ದು ಏರ್​ ಲಿಫ್ಟ್ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗುತ್ತಿದೆ.

ದಿಗಂತ್ ತಮ್ಮ ಕುಟುಂಬದೊಂದಿಗೆ ಕೆಲ ದಿನಗಳ ಹಿಂದೆ ಗೋವಾಗೆ ಟ್ರಿಪ್ ಹೋಗಿದ್ದರು. ಈ ವೇಳೆ ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ಅವಘಡ ಸಂಭವಿಸಿದೆ. ದಿಗಂತ್ ಅವರ ಬೆನ್ನುಮೂಳೆ ಕಾಲಿಗೂ ಗಾಯವಾಗಿದ್ದು, ಕುತ್ತಿಗೆ ಭಾಗಕ್ಕೆ ಬಲವಾಗಿ ಪೆಟ್ಟಾಗಿದೆ ಎನ್ನಲಾಗಿದೆ.

Key words: Actor-Diganth-injury-goa-Manipal hospital.