‘ದೃಶ್ಯಂ 2’ಗೂ ಕಿಚ್ಚ ಸುದೀಪ್ ನಂಟಿದೆ…! ಏನು ಗೊತ್ತಾ?!

ಬೆಂಗಳೂರು, ನವೆಂಬರ್ 28, 2021 (www.justkannada.in):  ‘ದೃಶ್ಯ 2’ ಕನ್ನಡದಲ್ಲೂ ರಿಮೇಕ್ ಆಗುತ್ತಿದ್ದು, ಇಲ್ಲಿಯೂ ಸಿನಿಮಾದಲ್ಲೂ ರವಿಚಂದ್ರನ್​ ಮತ್ತು ನವ್ಯಾ ನಾಯರ್​ ಮುಂದುವರಿದಿದ್ದಾರೆ.

ಇನ್ನು ವಿಶೇಷ ಎಂದರೆ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಪಾಲ್ಗೊಂಡಿದ್ದಾರೆ. ಈ ಹಿಂದೆ ಮರ್ಡರ್​ ಮಿಸ್ಟರಿ ಕಥೆಯುಳ್ಳ ಆ ಸಿನಿಮಾದಲ್ಲಿ ರವಿಚಂದ್ರನ್​ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​ ಆಗಿ ಕಾಣಿಸಿಕೊಂಡಿದ್ದರು.

‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್​ ಮತ್ತು ನವ್ಯಾ ನಾಯರ್​ ಮುಂದುವರಿದಿದ್ದಾರೆ. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್​ ಅಭಿನಯಿಸಿದ್ದಾರೆ.

ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕೆಲಸ ಮಾಡಿದ್ದಾರೆ.