ಹಾರೋಹಳ್ಳಿ ತಾಲ್ಲೂಕು ರಚನೆಗೆ ಶ್ರಮ ವಹಿಸಿದ್ದು ನಾನು- ಅಶ್ವಥ್ ನಾರಾಯಣ್ ಹೇಳಿಕೆಗೆ ಶಾಸಕಿ ಅನಿತಾ ಕುಮಾರಸ್ವಾಮಿ ಟಾಂಗ್.

ರಾಮನಗರ,ಫೆಬ್ರವರಿ,21,2023(www.justkannada.in):  ರಾಮನಗರ ಅಭಿವೃದ್ಧಿ ಹಾರೋಹಳ್ಳಿ ತಾಲ್ಲೂಕು ರಚನೆ ವಿಚಾರದಲ್ಲಿ ಸಚಿವ ಅಶ‍್ವಥ್ ನಾರಾಯಣ್ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.

ಹಾರೋಹಳ್ಳಿ ತಾಲ್ಲೂಕು ಉದ್ಘಾಟನೆ ನಂತರ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಹಾರೋಹಳ್ಳಿ ತಾಲ್ಲೂಕು ರಚನೆಗೆ ಸಾಕಷ್ಟು ಶ್ರಮ ವಹಿಸಲಾಗಿದೆ ಎಂದರು. ಅಶ್ವಥ್ ನಾರಾಯಣ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ, ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯೋಜನೆ ಜಾರಿ ತಂದಿದ್ದು, ತಾಲ್ಲೂಕು ಘೋಷಣೆಯಾಗಿದ್ದು  ಎಂದರು.

ಇದಕ್ಕೆ ಟಾಂಗ್ ಕೊಟ್ಟ ಅಶ್ವಥ್ ನಾರಾಯಣ್, ನಾವು ಸುಮ್ಮನೆ ಬೋರ್ಡ್ ಹಾಕಿಕೊಳ್ಳಲ್ಲ. ಹೆಚ್.ಡಿಕೆ ಸಿಎಂ ಆಗಿದ್ದಾಗ 2019ರಲ್ಲಿ ತಾತ್ವಿಕ ಅನುಮೋದನೆ ಕೊಟ್ಟಿದ್ದರು. 2022ರಲ್ಲಿ ತಾಲ್ಲೂಕು ರಚನೆಗೆ ಅಂತಿಮ ಅಧಿಸೂಚನೆ ಕೊಟ್ಟಿದ್ದು.  ನಮ್ಮ ಸರ್ಕಾರದಲ್ಲಿ ತಾಲ್ಲೂಕು ರಚನೆಗೆ ಅಧಿಸೂಚನೆ ಕೊಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆ ಅಭಿವೃದ್ದಿಯಾಗಿದೆ.  1850 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಟಾನ ಮಾಡಲಾಗಿದೆ.  ಶೀಘ್ರವೇ ಮೆಡಿಕಲ್ ಕಾಲೇಜು ಕಾಮಗಾರಿ ಆರಂಭಿಸುತ್ತೇವೆ.ಸಿಎಂ ಬೊಮ್ಮಾಯಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಐಐಟಿ ಮಾದರಿ ರಾಮನಗರ ಇಂಜಿನಿಯರಿಂಗ್ ಕಾಲೇಜು ಅಭೀವೃದ್ದಿ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮಾತು ಪ್ರಾರಂಭಿಸುತ್ತಿದ್ದಂತೆ ಸಚಿವ ಅಶ್ವಥ್ ನಾರಾಯಣ್ ಅಲ್ಲಿಂದ ತೆರಳಿದರು. ಈ ವೇಳೆ ಮಾತನಾಡಿ ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿದ ಅನಿತಾ ಕುಮಾರಸ್ವಾಮಿ, ನಾವು ಬರುವುದಕ್ಕೂ ಮುನ್ನ ಕಚೇರಿ ಉದ್ಘಾಟನೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ತಾಲೂಕು ಘೋಷಣೆಯಾಗಿತ್ತು. 450 ಕೋಟಿ ರೂ ವೆಚ್ಚದಲ್ಲಿ ಕುಡಿಯವ ನೀರು ಯೋಜನೆಯಾಗಿದ್ದು ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಿ ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಬಂದಿದ್ದರೇ ಯಾರು ಮಾತನಾಡುತ್ತಿರಲಿಲ್ಲ ಎಂದು ಅಶ್ವಥ್ ನಾರಾಯಣ್ ಗೆ ಚಾಟಿ ಬೀಸಿದರು.

Key words: MLA-Anitha Kumaraswamy -Tong –minister- Aswath Narayan –Harohalli- taluk.