ಹಣಕಾಸು ಇತಿಮಿತಿಯಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಕ್ರಮ- ಸಿಎಂ ಬೊಮ್ಮಾಯಿ .

ಬೆಂಗಳೂರು,ಫೆಬ್ರವರಿ,21,2023(www.justkannada.in):  ವೇತನ ಪರಿಷ್ಕರಣೆ ಮಾಡುವಂತೆ ಸಾರಿಗೆ ನೌಕರರು ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ  ತಿಳಿಸಿದರು.

ವೋಲ್ವೋ, ಅಂಬಾರಿ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಾರಿಗೆ ನೌಕರರ 7ರಿಂದ 8 ಬೇಡಿಕೆ ಈಡೇರಿಸಲಾಗಿದೆ. ಈಗ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ಇದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆ ಆರಂಭವಾದಾಗ ಎಲ್ಲಾ ತಾಲ್ಲೂಕುಗಳಲ್ಲಿ  4 ರಿಂದ 5 ಮಿನಿಬಸ್ ಓಡಾಡುತ್ತಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ  ಏಪ್ರಿಲ್ 1ರಿಂದ ಉಚಿತ ಬಸ್ ಪಾಸ್ ನೀಡುವಂತೆ ಸಾರಿಗೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ  ಸೂಚನೆ ನೀಡಿದರು.

Key words: Action – increase – salary – transport –employees-CM-Basavaraj Bommai.