‘ದ್ರೋಣ’ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ: ಫಿಲಂ ಸಿಟಿ ನಿರ್ಮಾಣ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಮಾ,10,2020(www.justkannada.in):  ಇತ್ತೀಚೆಗೆ ತೆರಕಂಡು ಪ್ರದರ್ಶನ ನೀಡುತ್ತಿರುವ ದ್ರೋಣ ಸಿನಿಮಾದ ಬಗ್ಗೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ದ್ರೋಣ ಸಿನಿಮಾ ಉತ್ತಮವಾಗಿ ಬಂದಿದ್ದು,  ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಸಾಮಾಜಿಕ ಕಳಕಳಿ ಇಟ್ಟು ಸಿನಿಮಾ ಮಾಡಿದ್ದೇವೆ. ನಾನು ಸಾಮಾಜಿಕ ಸಂದೇಶ ಕೊಡುವ ಸಿನಿಮಾವನ್ನೇ ಮಾಡುತ್ತಿದ್ದೇನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಶಿವರಾಜ್ ಕುಮಾರ್,  ಸಿನಿಮಾ ಜನರ ಮಾತಲ್ಲಿ ಬರಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿನ ಮಹತ್ತರ ಬೆಳವಣಿಗೆ ಸಿನಿಮಾವಾಗಿ ಬಂದಿದೆ. ನನಗೆ ದ್ರೋಣ ಸಿನಿಮಾದ ಪ್ರತಿಕ್ರಿಯೆ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಫಿಲಂ ಸಿಟಿ ನಿರ್ಮಾಣ: ನನ್ನ ನಾಯಕತ್ವದಲ್ಲಿಯೇ ಮುನ್ನಡೆಸಬೇಕು ಅಂದ್ರೆ ನಾನು ಸಿದ್ದ…

ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್,  ನಮ್ಮ ಇಂಡಸ್ಟ್ರೀಯಲ್ಲಿ ದೊಡ್ಡ ಫೀಲಂ  ಸಿಟಿ ಬೇಕಾಗಿದೆ. ಫಿಲಂ ಸಿಟಿ ವಿಚಾರದಲ್ಲಿ ಯಾರೋ ಒಬ್ಬರು ಲೀಡರ್ ಅಲ್ಲ. ಎಲ್ಲರೂ ಲೀಡರ್ ಗಳೇ. ನಮ್ಮ ಚಿತ್ರರಂಗದಲ್ಲಿ ಹಿರಿಯ ನಟರಾದ ರವಿಚಂದ್ರನ್, ಅನಂತ್ ನಾಗ್ ಇತರ ನಾಯಕರ ಸಹಕಾರ ಸಲಹೆ ಬೇಕಾಗಿದೆ. ಫೀಲಂ ಸಿಟಿ ನಿರ್ಮಾಣಕ್ಕೆ ನನ್ನ ಬೆಂಬಲ ಇದೆ. ನನ್ನ ನಾಯಕತ್ವದಲ್ಲಿಯೇ ಮುನ್ನಡೆಸಬೇಕು ಅಂದ್ರೆ ನಾನು ಸಿದ್ದ ಎಂದು ತಿಳಿಸಿದರು.

ಹಾಗೆಯೇ ಅವಸರದಿಂದ ಫೀಲಂ ಸಿಟಿ ನಿರ್ಮಾಣ ಆಗಲ್ಲ. ಇಂತಹ ಅವಕಾಶ ಮಿಸ್ ಮಾಡಕೊಳ್ಳಬಾರದು. ವಿಶ್ವ ಮಟ್ಟದಲ್ಲಿ ತಿರುಗಿ ನೋಡುವ ಹಾಗೆ ಮಾಡಬೇಕು ಎಂದು ಹ್ಯಾಟ್ರಿಕ್ ಹಿರೋ ಡಾ ಶಿವರಾಜ್ ಕುಮಾರ್  ತಿಳಿಸಿದರು.

ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆ. ಯಾರು ಆತಂಕ ಪಡಬೇಡಿ. ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಎಲ್ಲರಿಗೂ ಜೀವನದಲ್ಲಿ ಬದುಕಬೇಕೆಂಬ ಆಸೆ ಇರಬೇಕು. ಅದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಭಾರತಕ್ಕೆ ಕೋರೊನಾ ಬರುವುದಿಲ್ಲ. ನಾವು ರಾಗಿ ಮುದ್ದೆ ತಿಂದು ಚೆನ್ನಾಗಿ ಇದ್ದೇವೆ. ಮಾಸ್ಕ್ ಧರಿಸಿಕೊಂಡು ಓಡಾಡಬೇಕೆಂದು ಅಭಿಮಾನಿಗಳಿಗೆ ನಟ ಶಿವರಾಜ್ ಕುಮಾರ್ ಮನವಿ ಮಾಡಿದರು.

Key words: actor- shivarajkumar-drona-film city-corona virus