ನಟ ಧ್ರುವ ಸರ್ಜಾರ ಮುಂದಿನ ಚಿತ್ರ ಫಿಕ್ಸ್..?

ಬೆಂಗಳೂರು,ಮಾ,21(www.justkannada.in):  ನಟ ಧ್ರುವ ಸರ್ಜಾ  ನಟನೆಯ ಪೊಗರು ಚಿತ್ರ ಇನ್ನೇನು ಬಿಡುಗಡೆಯ  ಸಜ್ಜಾಗಿದ್ದು  ಈ ಮಧ್ಯೆ ಧ್ರುವಾ ಮುಂದಿನ ಚಿತ್ರ ಫಿಕ್ಸ್ ಆಗಿದೆಯಂತೆ. ಪೊಗರು ನಿರ್ದೇಶಿಸಿದ್ದ ನಂದ ಕಿಶೋರ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ..

ವಿಶೇಷ ಅಂದ್ರೆ ಈ ಚಿತ್ರ ತೆಲುಗು ರೀಮೇಕ್ ಅಂತೆ . ಇದಕ್ಕೆ ಕಾರಣ , ಧ್ರುವ ಸರ್ಜಾ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೆ ಕಾಲ್ ‍ ಶೀಟ್ ಕೊಟ್ಟಿದ್ದಾರೆ . ‘ ಅಧ್ಯಕ್ಷ ಇನ್ ಅಮೆರಿಕ ‘ ಚಿತ್ರವನ್ನು ನಿರ್ಮಿಸಿದ್ದ ಸಂಸ್ಥೆ ಅದು.

ಈ ಬಗ್ಗೆ ಇನ್ನೂ ಧ್ರುವಾ ಸರ್ಜಾ ಆಗಲಿ , ಚಿತ್ರತಂಡವಾಗಲಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ . ಇದುವರೆಗೆ ಧ್ರುವಾ ನಟಿಸಿರೋ 3 ಚಿತ್ರಗಳೂ ಸ್ವಮೇಕ್ . ಮುಂದಿನ ಸಿನಿಮಾ ರೀಮೇಕ್ ಆಗಿರಲಿದ್ಯಾ ಅನ್ನೋ ಪ್ರಶ್ನೆಗೆ ಕೆಲ ದಿನಗಳಲ್ಲೇ ಉತ್ತರ ಸಿಗಲಿದೆ .