ದಚ್ಚು ಕರೆಗೆ ಸಖತ್ ರೆಸ್ಪಾನ್ಸ್! ಪ್ರಾಣಿಗಳಿಗೆ ನೆರವಿಗೆ ನಿಂತ ಅಭಿಮಾನಿಗಳು

Promotion

ಬೆಂಗಳೂರು, ಜೂನ್ 10, 2021 (www.justkannada.in): ಪ್ರಾಣಿ ಸಂಗ್ರಹಾಲಯಗಳಿಗೆ ನೆರವು ನೀಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಕರೆಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ದಚ್ಚು ಕರೆಗೆ ನಾಲ್ಕು ದಿನಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಾಲ್ಕೇ ದಿನಗಳಲ್ಲಿ ಸುಮಾರು 70 ಲಕ್ಷ ರೂ.ಗೂ ಅಧಿಕ ಸಂಗ್ರಹವಾಗಿದೆ.

ಚಾಲೆಂಜಿಂಗ್ ಸ್ಟಾರ್ ಮಾನವೀಯತೆ ಮತ್ತು ಅವರ ಕರೆಗೆ ಓಗೊಟ್ಟ ಅಭಿಮಾನಿಗಳು ಇಬ್ಬರಿಗೂ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ ಸಲ್ಲಿಸಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಕೊಟ್ಟಿದ್ದರು.