Tuesday, September 29, 2026

BDA Apartments

ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ಉಳಿಕೆ ಪಂದ್ಯಗಳ ಆಯೋಜನೆ BDA JK_Adv BDA Adv
Home Front Page ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ಉಳಿಕೆ ಪಂದ್ಯಗಳ ಆಯೋಜನೆ

ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ಉಳಿಕೆ ಪಂದ್ಯಗಳ ಆಯೋಜನೆ

ಬೆಂಗಳೂರು, ಜೂನ್ 10, 2021 (www.justkannada.in): ಐಪಿಎಲ್ ನ ಉಳಿದ ಪಂದ್ಯಗಳು ಸೆಪ್ಟೆಂಬರ್ 19 ಮತ್ತು ಅಕ್ಟೋಬರ್ 15ರ ನಡುವೆ ನಡೆಯಲಿದೆ.

ಈ ಸಂಬಂಧ ಭಾರತೀಯ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. 2021ರ ಇಂಡಿಯನ್ ಪ್ರೀಮಿಯರ್ ಲೀಗ್ʼನ ಉಳಿದ ಭಾಗವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ಬಿಸಿಸಿಐ ಆತಿಥ್ಯ ವಹಿಸಲಿರುವ ಟಿ೨೦ ವಿಶ್ವಕಪ್ ಯುಎಇ ಮತ್ತು ಮತ್ತೊಂದು ಕೊಲ್ಲಿ ರಾಷ್ಟ್ರ, ಬಹುಶಃ ಒಮನ್ʼನಲ್ಲಿ ನಡೆಯುವ ಸಾಧ್ಯತೆಯಿದೆ.

ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ೨೦ ವಿಶ್ವಕಪ್ ಗೆ ದಿನಾಂಕಗಳನ್ನ ಅಧಿಕೃತವಾಗಿ ಪ್ರಕಟಿಸಬೇಕಿದೆ.