‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ಸಾಥ್ ನೀಡಿದ ಅಭಿಷೇಕ್ ಅಂಬರೀಶ್

Promotion

ಬೆಂಗಳೂರು, ಆಗಸ್ಟ್ 27, 2019 (www.justkannada.in): ನಟ ಅಭಿಷೇಕ್ ಅಂಬರೀಶ್ ‘ಕಾವೇರಿ ಕಾಲಿಂಗ್’ ಅಭಿಯಾನದೊಂದಿಗೆ ಕೈ ಜೋಡಿಸಿದ್ದಾರೆ.

ಇಶಾ ಫೌಂಡೇಷನ್’ನಿಂದ ಆರಂಭಿಸಿರುವ ‘ಕಾವೇರಿ ಕಾಲಿಂಗ್’ ಅಥವಾ ‘ಕಾವೇರಿ ಕೂಗು’ ಅಭಿಯಾನಕ್ಕೆ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಅಭಿಷೇಕ್ ಕೂಡ ಸಾಥ್ ನೀಡಲಿದ್ದಾರೆ.

ಅಭಿಷೇಕ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡುವ ಮೂಲಕ ನಮ್ಮ ನದಿಗಳಿಗಾಗಿ ಹೋರಾಡಲು ಮತ್ತು ರಕ್ಷಿಸಲು ನಾವೆಲ್ಲರೂ ಒಗ್ಗೂಡಬೇಕು. ಈಗಾಗಲೇ ನಮ್ಮ ದೇಶದಲ್ಲಿ ನೀರಿಗಾಗಿ ಹೋರಾಟ ಶುರುವಾಗಿದ್ದು, ನಮ್ಮ ಮುಂದಿನ ಪೀಳಿಗೆಗೆ ನೀರು ಬೇಕೇ ಬೇಕು ಎಂದು ಹೇಳಿದ್ದಾರೆ.