ಮೈಸೂರು,ಮಾರ್ಚ್,17,2021(www.justkannada.in): ಬೈಕ್ ಗಳ ನಡುವೆ ಡಿಕ್ಕಿಯಾಗಿ  ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕುವೆಂಪು ನಗರದ ಎಂ ಬ್ಲಾಕ್ ನಲ್ಲಿ ರಾತ್ರಿ ಸುಮಾರು 10.30ರ  ಸಮಯದಲ್ಲಿ ಈ ಘಟನೆ ನಡೆದಿದೆ. ಶ್ರೀರಾಂಪುರ ನಿವಾಸಿ ಗೌತಮ್  ಮೃತ ಬೈಕ್ ಸವಾರ. ಮತ್ತೊಬ್ಬ ಸವಾರ ಕುವೆಂಪುನಗರ ನಿವಾಸಿ ಮನೋಜ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಟಿಎಂ ನಿಂದ ಹಣ ಡ್ರಾ ಮಾಡಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಕೆ.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Accident – bike rider -dies -on the spot-mysore
 
            