‘ಅಪರೇಷನ್ ಗಂಗಾ’: ಉಕ್ರೇನ್ ನಿಂದ ಭಾರತಕ್ಕೆ  ಈವರೆಗೆ 16,500 ಮಂದಿ ಆಗಮನ.

ನವದೆಹಲಿ,ಮಾರ್ಚ್,7,2022(www.justkannada.in):  ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿದ್ದು ಈ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನ ಅಪರೇಷನ್ ಗಂಗಾ ಹೆಸರಿನಲ್ಲಿ ವಾಪಸ್ ಕರೆ ತರಲಾಗುತ್ತಿದೆ.

ಈ ನಡುವೆ ಈವರೆಗೆ ಉಕ್ರೇನ್ ನಿಂದ 82 ವಿಮಾನಗಳಲ್ಲಿ  16, 500 ಮಂದಿ ಭಾರತೀಯರನ್ನ ವಾಪಸ್ ಕರೆದರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಇಂದು 1500 ಮಂದಿಯನ್ನ ಏರ್ ಲಿಫ್ಟ್ ಮಾಡುವ ಸಾಧ್ಯತೆ ಇದೆ.

ಈ ನಡುವೆ ಉಕ್ರೇನ್ ನಿಂದ ಕರ್ನಾಟಕಕ್ಕೆ ಈವರೆಗೆ 458 ಮಂದಿ ಆಗಮಿಸಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ  ಮಾಹಿತಿ ನೀಡಿದೆ.

Key words: About-16,500-arrivals – Ukraine – India