ಶೇ.95% ರಷ್ಟು ಸೋಂಕಿತರಲ್ಲಿ ಗಂಭೀರ ರೋಗ ಲಕ್ಷಣ ಇಲ್ಲದ ಕಾರಣ ಆಸ್ಪತ್ರೆ ದಾಖಲಾತಿ ಅವಶ್ಯಕತೆ ಇರುವುದಿಲ್ಲ-ಸಚಿವ ಸುಧಾಕರ್…

ಬೆಂಗಳೂರು,ಏಪ್ರಿಲ್,16,2021(www.justkannada.in): ಶೇ.95% ರಷ್ಟು ಸೋಂಕಿತರಲ್ಲಿ ಯಾವುದೇ ಗಂಭೀರ ರೋಗಲಕ್ಷಣ ಇಲ್ಲವಾದ್ದರಿಂದ ಆಸ್ಪತ್ರೆ ದಾಖಲಾತಿ ಅವಶ್ಯಕತೆ ಇರುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.95-of-those-no-serious-symptom-corona-do-not-require-hospital-minister-sudhakar

ಈ ಕುರಿತು ಇಂದು ಟ್ವೀಟ್ ಮಾಡಿರುವ ಸಚಿವ ಸುಧಾಕರ್,  ಕೋವಿಡ್-19 ಎರಡನೇ ಅಲೆ ನಿಯಂತ್ರಣ ಕುರಿತಂತೆ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಸೋಂಕಿತರ ಚಿಕಿತ್ಸೆಗೆ ಅಂಬ್ಯುಲೆನ್ಸ್ ಮತ್ತು ಹಾಸಿಗೆಗಳ ಲಭ್ಯತೆ, ಔಷಧ ಮತ್ತು ಆಕ್ಸಿಜನ್ ಪೂರೈಕೆ ಸೇರಿದಂತೆ ಅನೇಕ ಕ್ರಮಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು.

ಶೇ.95% ರಷ್ಟು ಸೋಂಕಿತರಲ್ಲಿ ಯಾವುದೇ ಗಂಭೀರ ರೋಗಲಕ್ಷಣ ಇಲ್ಲವಾದ್ದರಿಂದ ಆಸ್ಪತ್ರೆ ದಾಖಲಾತಿ ಅವಶ್ಯಕತೆ ಇರುವುದಿಲ್ಲ.  ಅವಶ್ಯಕತೆ ಇರುವವರಿಗೆ ಹಾಸಿಗೆ ಒದಗಿಸಲು ಗಂಭೀರ ರೋಗಲಕ್ಷಣವಿಲ್ಲದ ಸೋಂಕಿತರಿಗೆ ತಾತ್ಕಾಲಿಕವಾಗಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ ಹೋಟೆಲ್ ಗಳಲ್ಲಿ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.95-of-those-no-serious-symptom-corona-do-not-require-hospital-minister-sudhakar

ಹಾಗೆಯೇ ಖಾಸಗಿ ಆಸ್ಪತ್ರೆಗಳು 50% ಬೆಡ್ ಮೀಸಲಿಡುವುದು ಕಡ್ಡಾಯವಾಗಿದ್ದು, ಮೇಲ್ವಿಚಾರಣೆಗೆ ಪ್ರತಿಯೊಂದು ಆಸ್ಪತ್ರೆಗೂ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಭಾನುವಾರ ಸರ್ವಪಕ್ಷ ಸಭೆ ಕರೆದಿದ್ದು ಸಭೆಯಲ್ಲಿ ಎಲ್ಲ ನಾಯಕರ ಅಭಿಪ್ರಾಯ ಪಡೆದು ಸಾಧಕ-ಬಾಧಕಗಳನ್ನು ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಸುಧಾಕರ್  ತಿಳಿಸಿದ್ದಾರೆ.

Key words: 95% of those- no serious -symptom–corona-do not- require –hospital-Minister -Sudhakar.