ಕಬ್ಬಿನ ದರ ನಿಗದಿ ಪುನರ್ ಪರಿಶೀಲನೆ ಮಾಡಬೇಕು: ಕೇಂದ್ರದ ಧೋರಣೆ ಖಂಡಿಸಿ ಆ.12 ರಂದು ರಸ್ತೆ ತಡೆ ಚಳುವಳಿ- ಕುರುಬೂರು ಶಾಂತಕುಮಾರ್.

ಮೈಸೂರು,ಆಗಸ್ಟ್,4,2022(www.justkannada.in): ನರೇಂದ್ರ ಮೋದಿಯವರು ನಿನ್ನೆ ನಿಗದಿ ಮಾಡಿರುವ ಕಬ್ಬಿನ ದರವನ್ನ ಕಬ್ಬು ಬೆಳೆಗಾರರ ಸಂಘ ಸಂಪೂರ್ಣವಾಗಿ ವಿರೋಧ ಮಾಡುತ್ತದೆ. ಕೂಡಲೇ ಇದನ್ನ ಪುನರ್ ಪರಿಶೀಲಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ತಿ.ನರಸೀಪುರದಲ್ಲಿ  ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಸಯನಿಕ ಗೊಬ್ಬರ, ಕೀಟನಾಶಕಗಳ ಮೇಲೆ  ಭಾರಿ ಬೆಲೆ ಏರಿಕೆಯಾಗಿದೆ. ಕಬ್ಬು ಕಟಾವು ಕೂಲಿ,ಸಾಗಾಣಿಕೆ ದರ ಹೆಚ್ಚಾಗಿದೆ. ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗೆ ಕೇವಲ 150ರೂ ಹೆಚ್ಚಳ ಮಾಡಿ ರೈತರಿಗೆ ಮೋಸ ಮಾಡಿದೆ. ಶಾಸಕರು, ಸಂಸದರು ತಮಗೆ ಬೇಕಾದಷ್ಟು ಸಂಬಳವನ್ನ ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ನೇರವಾಗಬೇಕಾದ ಸರ್ಕಾರ ರೈತರಿಗೆ ಮರಣ ಶಾಸನ ಬರೆಯುವಂತ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿಯವರು ನೆನ್ನೆ ನಿಗದಿ  ಮಾಡಿರುವ ಕಬ್ಬಿನ ದರವನ್ನ ಕಬ್ಬು ಬೆಳೆಗಾರರ ಸಂಘ ಸಂಪೂರ್ಣವಾಗಿ ವಿರೋಧ ಮಾಡುತ್ತದೆ. ಕೂಡಲೇ ಇದನ್ನ ಪುನರ್ ಪರಿಶೀಲಿಸಬೇಕು.

ಕಬ್ಬಿನ ದರ ಏರಿಕೆ ಮಾಡುವಂತೆ ತಾಲ್ಲೂಕು,ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಇಷ್ಟಾದರೂ ಸಹ ರಾಜ್ಯ ಸರ್ಕಾರದ ನಮ್ಮ ಹೋರಾಟವನ್ನ ಲಘುವಾಗಿ ಪರಿಗಣಿಸಿದೆ. ಕಬ್ಬಿನಿಂದ ಬರುವಂತ ಉತ್ಪನ್ನಗಳ ಲಾಭ ಬರುತ್ತಿವೆ. ಲಾಭ ಬರುವಂತ ಸಮಯದಲ್ಲೂ ರೈತರಿಗೆ ಮೋಸ ಮಾಡುವುದು ಸರಿಯೇ. ಇಷ್ಟೆಲ್ಲಾ ಧೋರಣೆಗಳನ್ನ ಖಂಡಿಸಿ 12ನೇ ತಾರೀಖು ಮೈಸೂರು ಚಾಮರಾಜನಗರ ಭಾಗದ ಎಲ್ಲಾ ರಾಜ್ಯ,ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ ಚಳುವಳಿ ಮಾಡಲು ತೀರ್ಮಾನಿಸಿದ್ದೇವೆ. ಎಲ್ಲಾ ಕಬ್ಬು ಬೆಲೆಗಾರರು ಸ್ವಯಂ ಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು  ಕುರುಬೂರು ಶಾಂತಕುಮಾರ್  ಹೇಳಿದರು.

ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ ಉದ್ದಿಮೆದಾರರ 10ಲಕ್ಷ ಕೋಟಿಯನ್ನ ಮನ್ನಾ ಮಾಡಿದೆ. ದೇಶದ ರೈತರ ಸಾಲ 5 ಲಕ್ಷ ಕೋಟಿ ಇರಬಹುದು ಇದನ್ನೇಕೆ ಮನ್ನಾ ಮಾಡಿಲ್ಲ. ಭಾರತ ರೈತರ ದೇಶ, ರೈತರೇ ದೇಶದ ಬೆನ್ನೆಲುಬು ಎಂದು ಕೇಂದ್ರ ಸರ್ಕಾರದ ಹೇಳುತ್ತೆ. ಆದರೆ ಉದ್ದಿಮೆಗಳು, ಬಂಡವಾಳಶಾಹಿಗಳು, ಶ್ರೀಮಂತರ ಪರವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ರೈತರು ಉತ್ಪಾದನೆ ಮಾಡುವಂತೆ ಮೊಸರು,ಮಜ್ಜಿಗೆ,ಅಪ್ಪಳ ಇವುಗಳ ಮೇಲೆ ಜಿಎಸ್ಟಿ ಜಾಸ್ತಿ ಮಾಡಲಾಗಿದೆ. ರೈತರ ಕೃಷಿ ಪಂಪ್ಸೆಟ್ ಹಾಗೂ ರಸಗೊಬ್ಬರ,ಕೀಟನಾಶಕಗಳ ಮೇಲೆ 18% ಜಿಎಸ್ಟಿ ಹಾಕಿದ್ದಾರೆ. ರೈತರಿಗೆ 2ಸಾವಿರ ಸಹಾಯದನ ನೀಡುತ್ತಿದ್ದೇವೆ ಎಂದು ಜೋರಾಗಿ ಮಾತನಾಡ್ತಾರೆ. ಮತ್ತೊಂದು ಕಡೆ ಕೃಷಿ ಉತ್ಪನ್ನಗಳ ಮೇಲೆ ಜಿಎಸ್ಟಿ ಹಾಕುವ ಮೂಲಕ ಮೋಸ ಮಾಡುತ್ತಿದ್ದಾರೆ. ಇದು ಸರ್ಕಾರದ ಇಬ್ಬಂದಿ ನೀತಿ ಎಂದು ಟೀಕಿಸಿದರು.special-package-announcement-cm-bs-yeddyurappa-farmer-leader-kuruburu-shanthakumar

ನವೆಂಬರ್ 8ನೇ ತಾರೀಖು ಪ್ರಧಾನಿಯವರು ರೈತರ ಹೋರಾಟಕ್ಕೆ ಮಣಿದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೀತೀವಿ ಅಂತ ಭರವಸೆ ನೀಡಿದ್ದರು. ಈಗ ಕೃಷಿ ಕಾಯ್ದೆ ಬಗ್ಗೆ ನಿಲುವು ತೆಗೆದುಕೊಳ್ಳಲು 26 ಜನರನ್ನ ಒಳಗೊಂಡ ಸಮಿತಿಯನ್ನ ಮಾಡಿದ್ದಾರೆ. ಆ ಸಮಿತಿಯಲ್ಲಿ ಇರುವ ಎಲ್ಲರು ಕೇಂದ್ರ ಸರ್ಕಾರದ ಪರವಾಗಿ ಇರುವಂತ ವ್ಯಕ್ತಿಗಳನ್ನ ಆಯ್ಕೆ ಮಾಡುವ ಮೂಲಕ ರೈತರಿಗೆ ಮೋಸ ಮಾಡಲು ಹೊರಟಿದ್ದಾರೆ. ಇದನ್ನ ಖಂಡಿಸಿ ಸಹ ದೆಹಲಿಯಲ್ಲಿ 22ನೇ ತಾರೀಖು ದೇಶದ ಮೂಲೆ ಮೂಲೆಗಳಿಂದ ಭಾರಿ ಸಂಖ್ಯೆಯಲ್ಲಿ ರೈತರು ಆಗಮಿಸಿ ಕಿಸಾನ್ ಮಹಾ ಪಂಚಾಯ್ತ್ ರ್ಯಾಲಿಯನ್ನ ಮಾಡ್ತಿದಿವಿ. ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Key words: Sugarcane -price -fixing – Roadblock movement – August 12 – Kuruburu Shanthakumar.