ದೇಶದಲ್ಲಿ ಮತ್ತೆ ಚೀತಾಗಳ ಯುಗಾರಂಭ: ನಮೀಬಿಯಾದಿಂದ ಭಾರತಕ್ಕೆ ಬಂದ 8 ಚೀತಾಗಳು.

ಮಧ್ಯಪ್ರದೇಶ,ಸೆಪ್ಟಂಬರ್,17,2022(www.justkannada.in):  70 ವರ್ಷಗಳ ನಂತರ ಭಾರತಕ್ಕೆ 8 ಚೀತಾಗಳು ಬಂದಿದ್ದು ದೇಶದಲ್ಲಿ ಮತ್ತೆ ಚೀತಾಗಳ ಯುಗಾರಂಭವಾಗಿದೆ.

ನಮೀಬಿಯಾದಿಂದ ಎಂಟು ಚೀತಾಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸಿವೆ.  ಮಧ್ಯಪ್ರದೇಶದ ಗ್ವಾಲಿಯರ್‌ ಗೆ ಇಂದು ಬೆಳಗ್ಗೆ ಬಂದು ಇಳಿದಿದ್ದು ಈ ಚೀತಾಗಳನ್ನ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಾಗಿದ್ದು, ಈ ಅಂಗವಾಗಿ ಇಂದು 8 ಚೀತಾಗಗಳನ್ನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡಲಿದ್ದಾರೆ. 3 ಗಂಡು ಮತ್ತು 5 ಹೆಣ್ಣು ಚೀತಾಗಳಿವೆ.

Key words: 8 cheetahs -come – India –from- Namibia