2021ರ ಏಷ್ಯಾ ಕಪ್ ಕ್ರಿಕೆಟ್ ನಡೆಯೋದು ಅನುಮಾನ

ಬೆಂಗಳೂರು, ಜನವರಿ 21, 2021 (www.justkannada.in): 2021ರ ಏಷ್ಯಾ ಕಪ್‌ ಕ್ರಿಕೆಟ್‌ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ನಡೆಯಬೇಕಿದ್ದ ಏಷ್ಯಾ ಕಪ್‌ ರದ್ದಾಗಿತ್ತು.

ಏಷ್ಯಾಕಪ್​ ವೇಳೆಗೆ ಐಸಿಸಿ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಏಷ್ಯಾ ಕಪ್ ಹಾಗೂ 2021 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಗಳು ಕ್ಲಾಶ್ ಆಗುವ ಸಾಧ್ಯತೆ ಇದೆ. ಒಂದೊಮ್ಮೆ ಏಷ್ಯಾ ಕಪ್‌ ನಡೆದರೂ, ಟೀಮ್​ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ.