ಅಯೋಧ್ಯೆ ತಲುಪಿದ ಪ್ರಧಾನಿ ಮೋದಿ: ಸೆಲೆಬ್ರಟಿಗಳು, ಗಣ್ಯಾತಿಗಣ್ಯರು ಆಗಮನ.

ಅಯೋಧ್ಯೆ,ಜನವರಿ,22,2024(www.justkannada.in): ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪ್ರಾರಂಭವಾಗಲು ಇನ್ನು ಕೆಲವೇ ಕ್ಷಣಗಳು ಬಾಕಿ ಇದ್ದು ಇದೀಗ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನಾ ಕಾರ್ಯ ನಡೆಯುತ್ತಿದ್ದು, ಕಾರ್ಯಕ್ರಮ ಕಣ್ತುಂಬಿಕೊಳ್ಳಲು ರಾಮಭಕ್ತರು ಕಾತರರಾಗಿದ್ದಾರೆ.

ಈ ಮಧ್ಯೆ ಗಣ್ಯಾತಿಗ್ಯರು, ಸೆಲೆಬ್ರಟಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರರಾದ  ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ,  ಹಿರಿಯ ನಟ ಅಮಿತಾಬ್ ಬಚ್ಚನ್ ಅಭೀಷೇಕ್ ಬಚ್ಚನ್,  ನಟ ಸೂಪರ್ ಸ್ಟಾರ್ ರಜನಿಕಾಂತ್, ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗಮಿಸಿದ್ದಾರೆ. ಚಿತ್ರರಂಗದ ಎಲ್ಲಾ ಟಾಪ್ ಸೆಲೆಬ್ರಟಿಗಳು ಭಾಗಿಯಾಗಿದ್ದಾರೆ.

Key words: PM Modi -reaches –Ayodhya-Dignitaries -arrive.