Saturday, August 8, 2026

BDA Apartments

Home Front Page ಅಕ್ರಮವಾಗಿ ಟೋಲ್ ಸಂಗ್ರಹ ಆರೋಪ: ಸುರತ್ಕಲ್ ಟೋಲ್ ಗೇಟ್ ಗೆ ನುಗ್ಗಿ ಪ್ರತಿಭಟನೆ.

ಅಕ್ರಮವಾಗಿ ಟೋಲ್ ಸಂಗ್ರಹ ಆರೋಪ: ಸುರತ್ಕಲ್ ಟೋಲ್ ಗೇಟ್ ಗೆ ನುಗ್ಗಿ ಪ್ರತಿಭಟನೆ.

ಮಂಗಳೂರು,ಅಕ್ಟೋಬರ್,18,2022(www.justkannada.in): ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಗೆ ಪ್ರತಿಭಟನಾಕಾರರು ನುಗ್ಗಿ ಧರಣಿ ನಡೆಸಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ಬಳಿ ಹೈಡ್ರಾಮಾ ಸೃಷ್ಠಿಯಾಗಿದ್ದು,  ಅಕ್ರಮವಾಗಿ ಟೋಲ್ ಸಂಗ್ರಹ ಎಂದು ಆರೋಪಿಸಿ ಕಾಂಗ್ರೆಸ್, ಡಿವೈಎಫ್ ಐ, ಸಿಪಿಐಎಂ ವತಿಯಿಂದ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಮುಖಂಡ ಮಿಥುನ್ ರೈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು . ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಟೋಲ್ ಪ್ಲಾಜಾಗೆ ನುಗ್ಗಲು ಯತ್ನಿಸಿದರು.  ಟೋಲ್ ಗೇಟ್ ಕೌಂಟರ್ ಮೇಲೆ ಹತ್ತಿ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಗಳೂರು ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು.

Key words: Allegation – illegal –toll- collection-Protest – Suratkal- toll gate.