ನಮ್ಮಪ್ಪನಾಣೆ ಮುಂದಿನ 5 ವರ್ಷ ನಾನೇ ಶಾಸಕನಾಗಿರುತ್ತೇನೆ: ಶಾಸಕ ಎಸ್.ಆರ್ ಶ್ರೀನಿವಾಸ್.

ತುಮಕೂರು,ಅಕ್ಟೋಬರ್,18,2022(www.justkannada.in): ಜೆಡಿಎಸ್ ನಿಂದ ಮುನಿಸಿಕೊಂಡು ದೂರ ಉಳಿದಿರುವ ಶಾಸಕ ಎಸ್.ಆರ್ ಶ್ರೀನಿವಾಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿನ ಬಗ್ಗೆ ಭವಿಷ್ಯ ನುಡಿದುಕೊಂಡಿದ್ದಾರೆ.

ನಮ್ಮಪ್ಪನಾಣೆ ಮುಂದಿನ 5 ವರ್ಷ ನಾನೇ ಶಾಸಕನಾಗಿರುತ್ತೇನೆ. ನನ್ನನ್ನ ಸುಲಭವಾಗಿ ಸೋಲಿಸುತ್ತೇನೆ ಅಂದುಕೊಂಡರೇ ಸಾಧ್ಯವಿಲ್ಲ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಕುಂಡಲಿ ಯಾರ ಊಹೆಗೂ ನಿಲುಕದ್ದು ಚುನಾವಣೆ ಹತ್ತಿರ ಬಂದಾಗ ಕಾಗೆ ಗೂಬೆಗಳೆಲ್ಲಾ ಬರುತ್ತವೆ. ಕಾಗೆ ಗೂಬೆಗಳೆಲ್ಲಾ ವೇಷ ಹಾಕಿಕೊಂಡು ಬರುತ್ತವೆ. ಜಿ,ಪಂ ಸದಸ್ಯನಾದ ಮೇಲೆ ಶಾಸಕನಾದೋನು ನಾನು. ನಮ್ಮಪ್ಪನಾಣೆ ನಾನೇ ಮುಂದಿನ 5 ವರ್ಷ ಶಾಸಕನಾಗಿರುತ್ತೇನೆ. ನನ್ನ ಸುಲಭವಾಗಿ ಸೋಲಿಸುತ್ತೇನೆ ಅಂದುಕೊಂಡರೇ ಅದು ಸಾಧ್ಯವಿಲ್ಲ ಎಂದಿದ್ದಾರೆ.

Key words:  MLA – next -5 years-MLA -SR Shrinivas.