ಪಬ್ ಜಿ ಗೇಮ್ ಹುಚ್ಚು: ನಿರಂತರ 6 ಗಂಟೆಗಳ ಕಾಲ ಆಡಿದ 16 ವರ್ಷದ ಬಾಲಕ ಸಾವು

ಇಂಧೋರ್:ಮೇ-31:(www.justkannada.in) ಆನ್ ಲೈನ್ ಅನ ಅಪಾಯಕಾರಿ ಗೇಮ್ ಗಳ ಬಗ್ಗೆ ಎಷ್ಟೇ ಎಚ್ಚರಿಕೆ ನಿಡಿದರೂ ಅದಕ್ಕೆ ಬಲಿಯಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪಾಯಕಾರಿ ಪಬ್ ಜಿ ಗೇಮ್ ಗೆ 16 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

ರಾಜಸ್ಥಾನದ ನಸೀರಾಬಾದ್​ ನಿವಾಸಿಯಾಗಿರುವ ಪಿಯು ವಿದ್ಯಾರ್ಥಿಯೊಬ್ಬ ತನ್ನ ಸ್ಮಾರ್ಟ್​ ಫೋನ್​ನಲ್ಲಿ ಸತತ ಆರು ಗಂಟೆವರೆಗೆ ಪಬ್​ಜಿ ಗೇಮ್​ ಆಡಿದ ಪರಿಣಾಮ ಸಾವಿಗೀಡಾಗಿದ್ದಾನೆ. ಮಧ್ಯಪ್ರದೇಶ ನೀಮುಚ್​ ಜಿಲ್ಲೆಯ ತನ್ನ ಸಂಬಂಧಿಕರ ಮನೆಯಲ್ಲಿ ಮೇ 26ರ ಸಂಜೆ ಈ ಘಟನೆ ನಡೆದಿದೆ. ಫರ್ಕಾನ್ ಖುರೇಷಿ(16) ಮೃತ ಬಾಲಕ. ಈತ ನಸೀರಬಾದ್​ನ ಕೇಂದ್ರೀಯ ವಿದ್ಯಾಲಯ ಪಿಯು ವಿದ್ಯಾರ್ಥಿ.

ಸೋದರ ಸಂಬಂಧಿಯ ವಿವಾಹ ಕಾರ್ಯಕ್ಕೆ ಬಂದ ಫರ್ಕಾನ್ ಹಾಗೂ ಆತಮನ ಕುಟುಂಬ ಮದುವೆ ತಯಾರಿಯಲ್ಲಿ ನಿರತರಾಗಿದ್ದರು. ಈನಡುವೆ ಪಬ್​ಜಿ ಗೇಮ್​ ಆಡುತ್ತಿದ್ದ ಫರ್ಕಾನ್​ಗೆ ಅನೇಕ ಬಾರಿ ಎಚ್ಚರಿಕೆಯನ್ನು ನೀಡಿದರೂ, ಅದನ್ನು ಲೆಕ್ಕಿಸದೇ ರಾತ್ರಿಯೆಲ್ಲ ಗೇಮ್​ ಆಡಿದ್ದಾನೆ. ಅಲ್ಲದೇ, ಮರುದಿನ ಮಧ್ಯಾಹ್ನ 12.30ಕ್ಕೆ ಗೇಮ್​ ಆಡಲು ಆರಂಭಿಸಿದ ಫರ್ಕಾನ್ ಯಾವುದೇ ವಿರಾಮವಿಲ್ಲದೇ ಸಂಜೆ 6.30ರವರೆಗೂ ಆಡಿದ್ದ ಎಂದು ತಂದೆ ಹರೂನ್ ರಶೀದ್ ಖುರೇಷಿ ತಿಳಿಸಿದ್ದಾರೆ.

ಗೇಮ್​ ಆಡುವಾಗ ಫರ್ಕಾನ್ ಜತೆ ಕೊಠಡಿಯಲ್ಲಿ ಆತನ ತಂಗಿ ಫಿಜಾ ಕೂಡ ಇದ್ದಳು. ಇದ್ದಕ್ಕಿದ್ದಂತೆ ಫರ್ಕಾನ್ ಬ್ಲ್ಯಾಸ್ಟ್​ ಇಟ್​, ಬ್ಲ್ಯಾಸ್ಟ್​ ಇಟ್​ ಎಂದು ಕೂಗತೊಡಗಿದ್ದಾನೆ ಅಲ್ಲದೇ ಅಯಾನ್​ ನೀವು ನನ್ನನ್ನು ಗೇಮ್​ ಮತ್ತು ಜೀವನದಲ್ಲಿ ಸೋಲುವಂತೆ ಮಾಡಿದರೆ, ನಾನು ನಿಮ್ಮೊಂದಿಗೆ ಮತ್ತೆ ಗೇಮ್​ ಆಡುವುದಿಲ್ಲ ಎಂದು ಹೇಳುತ್ತಿದ್ದ. ಇದೇ ವೇಳೆ ತಲೆನೋವುತ್ತಿದೆ ಎಂದು ಹೇಳುತ್ತಲೇ ಫರ್ಕಾನ್ ಕೆಳಗೆ ಕುಸಿದು ಬಿದ್ದಿದ್ದಾನೆ.

ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ಫರ್ಕಾನ್‌ನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ, ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಗೇಮ್​ನಲ್ಲಿ ತೀವ್ರವಾಗಿ ಮುಳುಗಿದ್ದ ಫರ್ಕಾನ್​ ಸೋಲಿನ ಹತಾಶೆಯಿಂದ ಭಾವೋದ್ವೇಗದಿಂದ ಹೃದಾಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಪಬ್ ಜಿ ಗೇಮ್ ಹುಚ್ಚು: ನಿರಂತರ 6 ಗಂಟೆಗಳ ಕಾಲ ಆಡಿದ 16 ವರ್ಷದ ಬಾಲಕ ಧಾರುಣ ಸಾವು
16-year-old dies after playing PUBG for 6 hours

16-year-old boy died of cardiac arrest after playing PUBG game on his mobile for six hours in a stretch in Neemuch town of Madhya Pradesh.