ಒಮಿಕ್ರಾನ್ ಬಗ್ಗೆ ಸಮಗ್ರ ಅಧ್ಯಯನ: ವರದಿ ಬಂದ ಬಳಿಕ ಮುಂದಿನ ಕ್ರಮ- ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಡಿಸೆಂಬರ್,6,2021(www.justkannada.in): ಕೊರೋನಾ ರೂಪಾಂತರಿ ಒಮಿಕ್ರಾನ್ ತೀವ್ರತೆ ಹೆಚ್ಚಾಗಿ ಇಲ್ಲ. ಒಮಿಕ್ರಾನ್ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ಧಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಾ.ಕೆ.ಸುಧಾಕರ್, ರೂಪಾಂತರಿ ಒಮಿಕ್ರಾನ್ ತೀವ್ರತೆ ಇಲ್ಲ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕದಲ್ಲಿ ಇನ್ನು 70 ಲಕ್ಷ ಲಸಿಕೆ ದಾಸ್ತಾನು ಇದೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.

ಒಮಿಕ್ರಾನ್ ಬಗ್ಗೆ  ಸಮಗ್ರಅಧ್ಯಯನ ಮಾಡಲಾಗುತ್ತಿದೆ. ಅಧ್ಯಯನ ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿವರೆಗೂ ನಾವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ . ಯಾವುದೇ ವೈರಸ್ ಮೊದಲ ಅಲೆಗಿಂತ 2ನೇ ಅಲೆ ತೀವ್ರವಾಗಿರುತ್ತೆ. 3ನೇ ಅಲೆ ತೀವ್ರತೆ ಕಡಿಮೆಯಾಗುತ್ತೆ. ಮುಂದಿನ ದಿನಗಳಲ್ಲಿ ಈ ವೈರಸ್ ಸಾಯುತ್ತದೆ ಎಂದರು.

Key words:  comprehensive- study – Omicron-next step -after – report – Minister- Dr. K. Sudhakar