ಜನ ವಿರೋಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರೈತರ ಸಂಕಷ್ಟಕ್ಕೆ ನಾವು ನೆರವಾಗಬೇಕು ಎಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು

ಹಾಸನ,ಆ,14,2020(www.justkannada.in): ಜನ ವಿರೋಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಇಂದು ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾತನಾಡಿದರು. ಪ್ರತಿಭಟನೆ ವೇಳೆಅವರು ಹೇಳಿದ್ದಿಷ್ಟು…

ಈ ಪಕ್ಷ ಹುಟ್ಟಿರೋದೆ ರೈತರ ಪರವಾಗಿ ಹೋರಾಟ ಮಾಡೋಕೆ, ನನ್ನ ಅರವತ್ತು ವರ್ಷದ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿಕೊಂಡೆ ಬಂದಿದ್ದೀನಿ . ರಾಜ್ಯದಲ್ಲಿ ಜನ ವಿರೋಧಿ ಕಾನೂನುಗಳಿಂದ ಆಗುವ ಪರಿಣಾಮದ ಬಗ್ಗೆ ಚರ್ಚೆ ಮಾಡಬೇಕಿದೆ. ಇಂದು ಆಕಸ್ಮಿಕವಾಗಿ ರಾಜ್ಯಸಭೆಗೆ ಸದಸ್ಯ ನಾಗಿದ್ದೇನೆ. ಎಷ್ಟು ಸಾಧ್ಯವೊ ಅಷ್ಟು ಹೋರಾಟ ಮಾಡುತ್ತೇನೆ.

ಈ ಕಾನೂನಿನ ಅಪಾಯದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನರಿಗೆ ತಿಳಿಸಬೇಕಿದೆ. ಮೈಸೂರು, ಮಂಡ್ಯ, ತುಮಕುರು, ಚಿಕ್ಕಬಳ್ಳಾಪುರ ಕೋಲಾರದಲ್ಲಿ ನಮ್ಮ ಶಾಸಕರಿದ್ದಾರೆ ಅಲ್ಲಿ ಪರಿಣಾಮಕಾರಿ ಹೋರಾಟ ನಡೆಸಬೇಕು ಜೊತೆಗೆ ರಾಜ್ಯದೆಲ್ಲೆಡೆ ನಮ್ಮ ಮುಖಂಡರುಗಳು ಹೋರಾಟ ನಡೆಸಿ ಜನತೆ ಪರವಾಗಿ ನಿಲ್ಲಬೇಕಾಗಿದೆ.

ನಮ್ಮದು ಅಧಿಕೃತ ವಿರೋಧ ಪಕ್ಷ ಅಲ್ಲ. ಆದರೂ ನಾವು ಹೋರಾಟ ಮಾಡುತ್ತಿದೀವಿ . ಇದು ದ್ವೇಷದಿಂದ ಮಾಡುತ್ತಿರೋ ಹೋರಾಟ ಅಲ್ಲ. ನಮ್ಮ ರೈತರ ಸಂಕಷ್ಟಕ್ಕೆ ನಾವು ನೆರವಾಗಬೇಕು . ರಾಜ್ಯದ 30 ಜಿಲ್ಲೆಗಳಲ್ಲೂ ಇದರ ವಿರುದ್ಧ ಹೋರಾಟ ಮಾಡುತ್ತೇವೆ, ಆಗಿರೊ ಈ ಅನ್ಯಾಯ ತಡೆಗಟ್ಟಲು ಹೋರಾಟ ಅನಿವಾರ್ಯವಾಗಿದೆ

ನಾನು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ , ಈ ಹೋರಾಟ ಹಾಸನದಿಂದ ಪ್ರಾರಂಬ ಮಾಡಿದ್ದೀವಿ.

ಕೊರೊನಾದಿಂದ ನನಗೇನಾದ್ರು ತೊಂದರೆ ಆಗುತ್ತೆ ಎಂದು ಕೆಲವರು ಹೆದರುತ್ತಾರೆ, ಆದ್ರೆ ನಾನು ದೃತಿಗೆಡೋದಿಲ್ಲ, ಸಾವು ಯಾವಾಗ ಯಾರಿಗೆ ಹೇಗೆ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

ಹಾಗಾಗಿ ನಾನು ಈ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ರಾಜ್ಯ ಸರ್ಕಾರ ತಂದಿರುವ ಜನ ವಿರೋಧಿ ತಿದ್ದುಪಡಿಗಳ ವಿರುದ್ಧ ಹೋರಾಟ ಮಾಡುತ್ತೀನಿ. ರಾಜ್ಯ ಹಾಗು ಕೇಂದ್ರದ ಕೆಲ‌‌ ಕಾನೂನುಗಳು ರೈತರಿಗೆ ಅನಾನುಕೂಲ ಆಗಿದೆ , ಕಾರ್ಮಿಕ‌ ನೀತಿ ಗೆ ತಿದ್ದುಪಡಿ ಮಾಡಿರೋದು ದೊಡ್ಡ ಮಾರಕ ಆಗಲಿದೆ
ರಾಜ್ಯ ಸಭೆಯಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಜನ ಸಂಘಟನೆ ಮಾಡಿ ರಾಜ್ಯಾದ್ಯಂತ ಹೋರಾಟ ಮಾಡಲು ಕೊರೊನ ಸ್ವಲ್ಪ ಅಡ್ಡಿಯಾಗಿದೆ, ಆದರೂ ರಾಜ್ಯದ 30 ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ.

ಇನ್ನು ಎರಡು ತಿಂಗಳಲ್ಲಿ ಕೊರೊನ ಸ್ವಲ್ಪ ಕಡಿಮೆಯಾಗಬಹುದು ಎಂಬುದು ನನ್ನ ಭಾವನೆ
ಈ‌ ಹೋರಾಟದಿಂದ ನಾವು ಹಿಂದೆ ಸರಿಯೋದಿಲ್ಲ. ಈ ಕಾಯಿದೆಗಳ ವಿರುದ್ಧ ಹಲವು ಸಂಘ ಸಂಸ್ಥೆಗಳು ಸಹ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ . ಅವರ ಜೊತೆ ನಾವೆಲ್ಲಾ ಸೇರಿ ಹೋರಾಟ ಮಾಡುತ್ತೇವೆ