ಹೊಸ ವರ್ಷಚರಣೆ ಹಿನ್ನೆಲೆ: ಕಾವೇರಿ ತೀರ ಪ್ರದೇಶಕ್ಕೆ ಪ್ರವಾಸಿಗರ ನಿರ್ಬಂಧ.

ಮಂಡ್ಯ,ಡಿಸೆಂಬರ್,31,2022(www.justkannada.in): ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಕಾವೇರಿ ತೀರ ಪ್ರದೇಶದಲ್ಲಿ ಮೋಜು ಮಸ್ತಿಗ ನಿರ್ಬಂಧ ವಿಧಿಸಲಾಗಿದೆ.

ಕಾವೇರಿ ತೀರ ಪ್ರದೇಶಕ್ಕೆ ಪ್ರವಾಸಿಗರ ನಿರ್ಬಂಧ ವಿಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ಎಂದು ಬಲಮುರಿ ಎಡಮುರಿ ಕೆಆರ್ ಎಸ್ ಹಿನ್ನೀರಿನಲ್ಲಿ ಯಾವುದೇ ಮೋಜು ಮಸ್ತಿ ಮಾಡುವಂತಿಲ್ಲ. ಇಂದು ಬೆಳಿಗ್ಗೆ 6 ರಿಂದ ಜನವರಿ 2ರವರೆಗೆ ಪ್ರವಾಸಿಗರಿಗೆ  ನಿರ್ಬಂಧ ವಿಧಿಸಲಾಗಿದೆ.

Key words: New Year -Restriction -tourists – Cauvery- shore- area-srirangapatna