ಮೀಸಲಾತಿ ಹೆಸರಲ್ಲಿ ಬಿಜೆಪಿಯಿಂದ ಮೋಸ: ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ವಿಜಯಪುರ,ಡಿಸೆಂಬರ್,31,2022(www.justkannada.in): ನಾಳೆ ಹೊಸವರ್ಷಾಚರಣೆ, ಹೊಸ ಬದಲಾವಣೆಯಾಗುತ್ತಿದೆ.  2023ಕ್ಕೆ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಇಂದು ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಮೀಸಲಾತಿ ಹೆಸರಲ್ಲಿ ಬಿಜೆಪಿ ಸರ್ಕಾರ ಮೋಸ ಮಾಡಿದೆ.  ಸರ್ಕಾರ ಚಾಕೊಲೇಟ್ ನೀಡಿದೆ. ಆ ಚಾಕೋಲೆಟ್ ಬೇಡ.  ನಾವು ಸಮಪಾಲು ಸಮಬಾಳು ಕೇಳಿದಿದ್ದೇವೆ ಎಂದರು.

ಯಾವ ಸಮಾಜಕ್ಕೂ ಸರ್ಕಾರ ನ್ಯಾಯ ಒದಗಿಸಿಲ್ಲ ಕಾನೂನು ಬದ್ಧವಾಗಿ ಮೀಸಲಾತಿ ಹಂಚಿಕೆಯಾಗಿಲ್ಲ.  ಯಾರಿಗೂ ಮೀಸಲಾತಿ ಸಿಗದಂತೆ ಸರ್ಕಾರ ಮಾಡಿದೆ.  ರಾಜಕೀಯವಾಗಿ ಹೆದರಿ ಮೀಸಲಾತಿ ತೀರ್ಮಾನ ಮಾಡಿದೆ ಎಂದು ಟೀಕಿಸಿದರು.

Key words: Cheating – BJP – reservation-KPCC- President -DK Shivakumar.