ಕಾಂಗ್ರೆಸ್ ​ಗೆ ಬರ್ತಿಯೋ ಸಿಡಿ ಬಿಡುಗಡೆ ಮಾಡ್ಲೋ ಎಂದು  ಸಚಿವರೊಬ್ಬರಿಗೆ ಡಿಕೆ ಶಿವಕುಮಾರ್ ಹೆದರಿಸಿದ್ದಾರೆ- ಶಾಸಕ ರಮೇಶ್​ ಜಾರಕಿಹೊಳಿ.

ಬೆಳಗಾವಿ,ಮಾರ್ಚ್,13,2023(www.justkannada.in): ಕಾಂಗ್ರೆಸ್ ​ಗೆ ಬರ್ತಿಯೋ ಸಿಡಿ ಬಿಡುಗಡೆ ಮಾಡ್ಲೋ ಎಂದು ಸಚಿವರೊಬ್ಬರಿಗೆ ಡಿಕೆ ಶಿವಕುಮಾರ್ ಹೆದರಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೊಸಬಾಂಬ್ ಸಿಡಿಸಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಸಿಡಿಯೇ ನನ್ನ ಉದ್ಯೋಗ ಅಂತಾನೆ. ನನ್ನ ಜೊತೆಗಿನ ಓರ್ವ ಮಂತ್ರಿಗೆ ಡಿಕೆ ಶಿವಕುಮಾರ್​ ಹೆದರಿಸುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರುತ್ತಿಯೋ, ಸಿಡಿ ಬಿಡ್ಲೋ ಎಂದು ಬೇದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿಡಿ ಪಾರ್ಟ್ನರ್​ ಮತ್ತು ಆ್ಯಕ್ಟರ್ ಬೆಳಗಾವಿಯಲ್ಲೇ ಇದ್ದಾರೆ. ಅದಕ್ಕೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಈಗ ಮತ್ತೊಬ್ಬ ಡ್ರೈವರ್ ಸಹ ಸೇರಿಕೊಂಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ನಾವು ಯುದ್ಧ ಮಾಡುವ ಜನ ಷಡ್ಯಂತ್ರ ಮಾಡೋವರು ಅಲ್ಲ. ನನ್ನ ಬಳಿ 10 ಸಾಕ್ಷಿಗಳು ಇವೆ, ನಾನು ಬಹಿರಂಗ ಮಾಡಲ್ಲ. ಅವನ ಪತ್ನಿಯು ನನ್ನ ತಂಗಿ ಇದ್ಧಂತೆ, ಮನೆ ಒಡೆಯಬಾರದು. ಇಂತಹ ವ್ಯಕ್ತಿಯ ಕೈಯಲ್ಲಿ ತಪ್ಪಿ ರಾಜ್ಯದ ಅಧಿಕಾರ ಸಿಕ್ಕರೆ ಏನಾಗಬಹುದು. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ರಮೇಶ್ ಜಾರಕಿಹೊಳಿ ಗುಡುಗಿದರು.

ಕಾಂಗ್ರೆಸ್​ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ. ಪರಮೇಶ್ವರ್ ರಂತಹ, ಒಳ್ಳೇಯವರು ಇದ್ದಾರೆ. ಅವರೇದು ಏನು ನಡೆಯಲ್ಲ, ಇಲ್ಲ. ಬ್ಲ್ಯಾಕ್ ಮೇಲರ್ ಕೈಯಲ್ಲಿ  ಸಿಕ್ಕಿ ಕಾಂಗ್ರೆಸ್  ಪಕ್ಷ ಮುಗಿದಿದೆ ಎಂದು ಹರಿಹಾಯ್ದರು.

Key words: DK Shivakumar -threatened – minister -CD – MLA -Ramesh Jarakiholi