‘ದಿ ಎಲಿಫಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿ ಹಾಗೂ ಆರ್ ಆರ್ ಆರ್ ಚಿತ್ರದ ‘ನಾಟು ನಾಟು’ ಹಾಡಿಗೆ ಒಲಿದ ಆಸ್ಕರ್ ಪ್ರಶಸ್ತಿ.

ನವದೆಹಲಿ,ಮಾರ್ಚ್,13,2023(www.justkannada.in): ದಿ ಎಲಿಫಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿ ಹಾಗೂ ಆರ್ ಆರ್ ಆರ್ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದಿದೆ.

ಭಾರತಕ್ಕೆ ಈ ಬಾರಿ ಎರಡು ಆಸ್ಕರ್​ ಅವಾರ್ಡ್ ಬಂದಿದ್ದು,  ‘ದಿ ಎಲಿಫಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿ ಹಾಗೂ ​ಆರ್ ಆರ್ ಆರ್ ಚಿತ್ರದ ‘ನಾಟು ನಾಟು..’ ಹಾಡು ಪ್ರಶಸ್ತಿ ಗೆದ್ದಿವೆ.

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಪಡೆದಿದೆ. ಇನ್ನು, ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ.

Key words:  Elephant Whisperers- Documentary – RRR-Natu Natu-song -Oscar award.