Friday, August 7, 2026

BDA Apartments

Home Front Page ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟ ಮಾಜಿ ಶಾಸಕ ಕೆ.ಎನ್ ರಾಜಣ್ಣ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟ ಮಾಜಿ ಶಾಸಕ ಕೆ.ಎನ್ ರಾಜಣ್ಣ.

ತುಮಕೂರು,ಜುಲೈ,1,2022(www.justkannada.in): ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ  ವಿವಾದಾತ್ಮಕ ಹೇಳಿಕೆಯನ್ನ ನೀಡುವ ಮೂಲಕ  ಮಾಜಿ ಶಾಸಕ ಕೆ.ಎನ್ ರಾಜಣ್ಣ ನಾಲಿಗೆ ಹರಿಬಿಟ್ಟಿದ್ದಾರೆ.

ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ.ಎನ್​.ರಾಜಣ್ಣ, ‘ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ..(ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹೇಳಿದ ಮಾತು) ನಾಲ್ವರು ಹೊತ್ಕೊಂಡ್ ಹೋಗೋದು ಹತ್ತಿರದಲ್ಲೇ ಇದೆ. ಎಂದು ಹೇಳಿದ್ದಾರೆ.

ಜವಾಬ್ದಾರಿ ಮರೆತು ಮಾಜಿ ಪಿಎಂ ಹೆಚ್.ಡಿಡಿ ಬಗ್ಗೆ  ಕೆ.ಎನ್ ರಾಜಣ್ಣ ಕೀಳುಮಾತನ್ನಾಡಿದ್ದು,  ದೇವೇಗೌಡರ ಬಗ್ಗೆ ರಾಜಣ್ಣ ಹಗುರವಾಗಿ ಮಾತಾಡಿದ್ದು ಸರಿ ಇಲ್ಲ. ಅವರು ಕ್ಷಮೆಯಾಚಿಸಬೇಕು ಎಂಬ ಚರ್ಚೆ ಶುರುವಾಗಿದೆ.

Key words: Former MLA- KN Rajanna- about -former Prime Minister -HD Deve Gowda.