Tuesday, September 22, 2026

BDA Apartments

ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನ BDA JK_Adv BDA Adv
Home Front Page ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನ

ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನ

ಲಂಡನ್, ಡಿಸೆಂಬರ್ 26, 2020 (www.justkannada.in): ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನರಾಗಿದ್ದಾರೆ.

ರಾಬಿನ್ ಜಾಕ್‌ಮ್ಯಾನ್ ಇಂಗ್ಲೆಂಡ್ ಪರವಾಗಿ 15 ಏಕದಿನ ಪಂದ್ಯ ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ತಮ್ಮ 75ನೇ ವಯಸ್ಸಿನಲ್ಲಿ ಜಾಕ್‌ಮ್ಯಾನ್ ಮೃತಪಟ್ಟಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೇಳಿದೆ.

1966ರಿಂದ 1982ರ ವರೆಗೆ ಇಂಗ್ಲೆಂಡ್‌ನ 399 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಾಕ್‌ಮನ್ ಆಡಿದ್ದು 1402 ವಿಕೆಟ್ ಪಡೆದಿದ್ದಾರೆ.

ನಿವೃತ್ತಿಯ ನಂತರ ಜಾಕ್‌ಮನ್ ಪತ್ನಿ ವೋಯ್ನೆ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಅವರು ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸಾಕಷ್ಟು ಖ್ಯಾತಿಯನ್ನು ಪಡೆದಿದ್ದರು.