Monday, September 21, 2026

BDA Apartments

ಕೇಂದ್ರ ಬಜೆಟ್ ಬಗ್ಗೆ ಲೇವಡಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ… BDA JK_Adv BDA Adv
Home Front Page ಕೇಂದ್ರ ಬಜೆಟ್ ಬಗ್ಗೆ ಲೇವಡಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ…

ಕೇಂದ್ರ ಬಜೆಟ್ ಬಗ್ಗೆ ಲೇವಡಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ…

ನವದೆಹಲಿ,ಜು,5,2019(www.justkannada.in): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ  ಕೇಂದ್ರ ಬಜೆಟ್  ಬಗ್ಗೆ  ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಟ್ವಿಟರ್ ನಲ್ಲಿ ಬಜೆಟ್ ಬಗ್ಗೆ  ಕೇಂದ್ರದ ಕಾಲೆಳೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಚಿಪ್ಪಿನಲ್ಲಿ ಕೇಂದ್ರ ಬಜೆಟ್ ಕೊಟ್ಟಿದ್ದಾರೆ. ಎಲ್ಲವೂ ಸೂರ್ಯನ ಕೆಳಗೆ ಇದೆ ಆದರೆ ಯಾವುದೂ ಕೈಗೆ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ  ಬಜೆಟ್ ಬಗ್ಗೆ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಪೂರಕ ಅಲ್ಲ. ಇದು ನಿರಾಶದಾಯಕ ಬಜೆಟ್ ಆಗಿದೆ. ಆರ್ಥಿಕ ಬೆಳವಣಿಗೆಗೆ ವೇಗ ಕೊಡುವಂತಹ ಬಜೆಟ್ ಅಲ್ಲ ಎಂದು ಟೀಕಿಸಿದರು.

ಹಾಗೆಯೇ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದರೆ ಆದಾಯ ದ್ವಿಗುಣ ಮಾಡುವಂತೆ ಯೋಜನೆ ಕೊಟ್ಟಿಲ್ಲ.  ಬಜೆಟ್ ನಲ್ಲಿ ನೀರಾವರಿ ಯೋಜನೆ ಕಡೆಗೆ ಗಮನ ಹರಿಸಿಲ್ಲ. ಜತೆಗೆ ಕರ್ನಾಟಕಕ್ಕೆ ಯಾವುದೇ ಯೋಜನೆ ಘೋಷಿಸಿಲ್ಲ. ಬಿಜೆಪಿಯವರೂ ಹೇಳಿದ್ದನ್ನ ಮಾಡಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Key words:  former CM Siddaramaiah-Criticism-about -Union Budget.