Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕೊನೆಗೂ ನನಸಾದ ಹಳ್ಳಿ ಹಕ್ಕಿ ಕನಸು ! ಕೆ.ಆರ್.ನಗರದಲ್ಲಿ ಅಭಿಮಾನಿಗಳ ಸಂಭ್ರಮ

ಕೊನೆಗೂ ನನಸಾದ ಹಳ್ಳಿ ಹಕ್ಕಿ ಕನಸು ! ಕೆ.ಆರ್.ನಗರದಲ್ಲಿ ಅಭಿಮಾನಿಗಳ ಸಂಭ್ರಮ

ಬೆಂಗಳೂರು, ಜುಲೈ 22, 2020 (www.justkannada.in): ಕೊನೆಗೂ ಹಳ್ಳಿ ಹಕ್ಕು ಕನಸು ನನಸಾಗಿದೆ.

ಹೌದು. ಕೊನೆಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಎಂಎಲ್ಸಿ ಹುದ್ದೆ ಸಿಕ್ಕಿದೆ. ಸಿ.ಪಿ.ಯೋಗೇಶ್ವರ್ ಗೆ ಕೊನೆಗೂ ಬಿಜೆಪಿ ವರಿಷ್ಠರ ಮಣೆ ಹಾಕಿದ್ದಾರೆ. ವಿಶ್ವನಾಥ್, ಸಿ.ಪಿ.ಯೋಗೀಶ್ವರ್ ಜೊತೆ ಮೂವರಿಗೆ ಎಂಎಲ್ಸಿ ಸ್ಥಾನ ದೊರೆತಿದೆ. ಇದರ ಜತೆ ಭಾರತಿಶೆಟ್ಟಿ, ಶಾಂತಾರಾಂ ಸಿದ್ದಿ, ತಳವಾರ್ ಸಾಬಣ್ಣ ಮೇಲ್ಮನೆಗೆ ಪ್ರವೇಶ ದೊರೆತಿದೆ.

ನೂತನ ಮೇಲ್ಮನೆ ಸದಸ್ಯರ ಪಟ್ಟಿಗೆ ರಾಜ್ಯಪಾಲ ವಜುಬಾಯಿ ವಾಲಾ ಅಂಕಿತ ಹಾಕಿದ್ದಾರೆ.

ವಿಶ್ವನಾಥ್ ಅಭಿಮಾನಿಗಳ ಸಂಭ್ರಮ…

ಕೆ.ಆರ್.ನಗರದಲ್ಲಿ ವಿಶ್ವನಾಥ್ ಅಭಿಮಾನಿಗಳು ಸಂಭ್ರಮಿಸಿದರು. ವಿಶ್ವನಾಥ್‌ಗೆ ಹಾರ ಹಾಕಿ ಸಂಭ್ರಮಿಸಿದ ಅಭಿಮಾನಿಗಳು. ಸಾಹಿತ್ಯ ಕ್ಷೇತ್ರದಲ್ಲಿ ವಿಧಾನ ಪರಿಷತ್‌ಗೆ ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಹರ್ಷೋದ್ಘಾರ ಮೊಳಗಿಸಿದರು. ಸಚಿವ ಸ್ಥಾನದ‌ ಆಕಾಂಕ್ಷಿಯಾಗಿರೋ ವಿಶ್ವನಾಥ್. ಇದೀಗಾ ಎಂಎಲ್‌ಸಿ ಸ್ಥಾನ‌ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.