Sunday, August 16, 2026

BDA Apartments

Home Front Page ಸಣ್ಣ ಹಳ್ಳಿಯ ತಳವಾರ್ ಸಾಬಣ್ಣಗೆ ಒಲಿದ ಎಂಎಲ್ಸಿ ಹುದ್ದೆ!

ಸಣ್ಣ ಹಳ್ಳಿಯ ತಳವಾರ್ ಸಾಬಣ್ಣಗೆ ಒಲಿದ ಎಂಎಲ್ಸಿ ಹುದ್ದೆ!

ಬೆಂಗಳೂರು, ಜುಲೈ 22, 2020 (www.justkannada.in): ಡಾ.ತಳವಾರ್ ಸಾಬಣ್ಣನವರು ಕಲ್ಬುರ್ಗಿ ಜಿಲ್ಲೆಯ ಒಂದು ಸಣ್ಣ ಗ್ರಾಮದಿಂದ ಬಂದವರು. ಅವರೀಗ ಮೇಲ್ಮನೆ ಸದಸ್ಯ ಸ್ಥಾನ ಒಲಿದಿದೆ.

ಡಾ.ತಳವಾರ್ ಸಾಬಣ್ಣನವರು ಬಡತನ, ಹಾಗೂ ಸಮಾಜದ ಮೇಲು ಕೀಳೆಂಬ ನೋವನ್ನು ಉಂಡು ಸಮಾಜಕ್ಕೆ ಅಮೃತ ನೀಡಿದವರು. ಚಿನ್ನದ ಪದಕದೊಂದಿಗೆ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದು ಕಳೆದ ಮುವ್ವತ್ತು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಹಾಗೂ ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನೇರ ನಡೆ ನುಡಿಯ ಸಾಬಣ್ಣನವರು ಕಳೆದ ಹಲವು ವರ್ಷಗಳಿಂದ ಸಾಮರಸ್ಯ ಗತಿವಿಧಿಯ ಕಾರ್ಯಕರ್ತರಾಗಿ ಕಾರ್ಯ ಮಾಡುತ್ತಿದ್ದಾರೆ. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಅರ್ಥಶಾಸ್ತ್ರದ ಪ್ರಾಧ್ಯಾಪಕ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.