ನಟ ಚೇತನ್  ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ಮಾಡ್ತೇವೆ- ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ

ಬೆಂಗಳೂರು,ಏಪ್ರಿಲ್,28,2026 (www.justkannada.in):   ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಜಾಗ ನೀಡಿದ್ದಕ್ಕೆ ಆಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್ ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಜಯಮಾಲ, ಚೇತನ್ ಹೇಳಿಕೆಯಿಂದ ಬಹಳ ನೋವು ಆಗಿದೆ. ಚಿತ್ರರಂಗದ ಒಂದು ಭಾಗವಾಗಿರುವ ವ್ಯಕ್ತಿಯಿಂದ ತಲೆತಗ್ಗಿಸುವಂತಾಗಿದೆ. ಈ ರೀತಿ ಹೇಳಿಕೆ ನೀಡಿ ಸಂಸ್ಥೆ ಫ್ಯಾನ್ಸ್ ಗೆ ಮುಜುಗರ ಮಾಡುತ್ತಿದ್ದಾರೆ.

ಚೇತನ್ ದೊಡ್ಡ ತಪ್ಪು ಮಾಡಿದ್ದಾರೆ.  ಪಾಕ್ ಜಿಂದಾಬಾದ್ ಎಂದಿರುವ ವ್ಯಕ್ತಿ ನೀವು ಕ್ಷಮೆ ಕೇಳಬೇಕು.   ನಟ ಚೇತನ್ ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ ಎಂದು ಜಯಮಾಲ ತಿಳಿಸಿದರು.

Key words:  Dr. Raj Kumar, Actor, Chethan, membership, Film Chamber, President, Jayamala