Thursday, July 30, 2026

BDA Apartments

Home Front Page ದಲಿತ ಸಿಎಂ ವಿಚಾರದಲ್ಲಿ ನಾನು ಈಗಲು ಬದ್ಧ: ಸಿದ್ದರಾಮಯ್ಯ ಮುಂದುವರೆಯಲಿ- ಕೆ.ಎನ್ ರಾಜಣ್ಣ

ದಲಿತ ಸಿಎಂ ವಿಚಾರದಲ್ಲಿ ನಾನು ಈಗಲು ಬದ್ಧ: ಸಿದ್ದರಾಮಯ್ಯ ಮುಂದುವರೆಯಲಿ- ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,28,2026 (www.justkannada.in): ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ದ. ಆದರೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, 2013-18ರ ಸಂದರ್ಭದಲ್ಲಿ ಇದ್ದ ಸಿದ್ದರಾಮಯ್ಯ ಅವರಿಗೂ ಈಗಿನ ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸವಿದೆ. ರಾಜಕಾರಣದಲ್ಲಿ ಬಹಳಷ್ಟು ನೀರು ಹರಿಬೇಕಾದ ಸಮಯ ಇದೆ. ರಾಹುಲ್ ಹೇಳಿದ್ದನ್ನು ಪಾಲನೆ ಮಾಡುವ ಮನಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ನಾವು ಏನೇನು ಹೇಳಬೇಕೋ ಅದನ್ನ ಹೇಳಿದ್ದೇವೆ ಎಂದರು.

ಹೈಕಮಾಂಡ್ ಗೊಂದಲಕ್ಕೆ ಅವಕಾಶ ಕೊಡಬಾರದು ಕಾಂಗ್ರೆಸ್ ನಲ್ಲಿ ನಾಯಕತ್ವ ಗೊಂದಲ ಬಗೆಹರಿಯಬೇಕು  ಗೊಂದಲ ಮುಂದುವರೆದರೇ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಹೀಗಾಗಿ ಗೊಂದಲ ನಿವಾರಣೆ ಮಾಡಬೇಕು ಎಂಬುದು ಎಲ್ಲರ ಅಭಿಪ್ರಾಯ  ಗೊಂದಲ ಬಗೆಹರಿದರೆ ಕ್ರಿಯಾಶೀಲವಾಗಿ ಕೆಲಸ ಮಾಡಬಹುದು. ಪಕ್ಷದಲ್ಲಿರುವ ಗೊಂದಲ ಬಗೆಹರಿಸಿದಷ್ಟು ರಾಜ್ಯಕ್ಕೆ ಒಳ್ಳೆಯದು ಎಂದರು.

ಈ ವಿಚಾರದ ಬಗ್ಗೆ ಮಾನಸಿಕ ಸ್ಥಿರತೆ ಇಟ್ಟುಕೊಂಡು ನಿರ್ಧಾರ ಮಾಡಬೇಕಿದೆ.  ಸಿಎಂ ಅವರು ಮುಕ್ತಮನಸ್ಸಿನಲ್ಲಿ ಇದ್ದಾರೆ. ರಾಹುಲ್ ಸೂಚನೆ ಪಾಲಿಸುತ್ತೀನಿ ರಾಹುಲ್ ತೀರ್ಮಾನದಂತೆ ನಡೆಯುತ್ತೇನೆ ಎಂದಿದ್ದಾರೆ ಎಂದರು.

Key words: Dalit CM, Siddaramaiah, continue, K.N. Rajanna