ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶಕ್ಕೆ ಸಿಎಂಗೆ ಮನವಿ ಮಾಡಿದ ಫಿಲಂ ಚೇಂಬರ್ ನಿಯೋಗ.

ಬೆಂಗಳೂರು,ಜನವರಿ,29,2022(www.justkannada.in):  ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಹಲವು ನಿಯಮಗಳ ಸಡಿಲಿಕೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದ್ದು, ಆದರೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ನಿರ್ಬಂಧವನ್ನು ಮುಂದುವರೆಸಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ  ಫಿಲಂ ಚೇಂಬರ್ ಅಧ್ಯಕ್ಷ  ಜೈರಾಜ್, ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ. ಚಿತ್ರರಂಗ ಸಂಕಷ್ಟದಲ್ಲಿದೆ ಶುಕ್ರವಾರ ನಿರ್ಬಂಧ ತೆರವು ಮಾಡುವ ವಿಶ್ವಾಸವಿದೆ.  ನಿಯಮ ಪಾಲನೆ ಮಾಡಿ ಚಿತ್ರಮಂದಿರ ನಡೆಯಲಿವೆ ಎಂದು ತಿಳಿಸಿದರು.

ಸೋಮವಾರ ಭೇಟಿ ಮಾಡುವಂತೆ ಸಿಎಂ ಹೇಳಿದ್ದಾರೆ ಸೋಮವಾರ ಮತ್ತೆ  ಸಿಎಂ ಭೇಟಿ ಮಾಡುತ್ತೇವೆ.  ರೂಲ್ಸ್ ತೆರವು ಮಾಡುವ ವಿಶ್ವಸವಿದೆ ಎಂದು ನಿರ್ಮಾಪಕ ಎನ್ ಎಂ. ಸುರೇಶ್ ತಿಳಿಸಿದರು.

Key words: Film Chamber – CM Basavaraj bommai- theaters.