“ರೈತರ  ಹೆಸರಲ್ಲಿ ರಾಜಕೀಯ ಪುಂಡಾಟ, ಡಿಕೆಶಿ,ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ”

ಬೆಂಗಳೂರು,ಜನವರಿ,27,2021(www.justkannada.in) : ರೈತರ ಹೆಸರಲ್ಲಿ ರಾಷ್ಟ್ರಘಾತುಕ ಕಾರ್ಯ. ರೈತರ ಹೆಸರಲ್ಲಿ ರಾಜಕೀಯ ಪುಂಡಾಟ, ದಾಂಧಲೆ ಮಾಡುವುದು ಸರಿಯಲ್ಲ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.jkನವದೆಹಲಿಯಲ್ಲಿ ನಡೆದ ಹಿಂಸಾಚಾರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾಂಧಲೆ ಮಾಡುವುದು ರೈತರ ಕಾರ್ಯವಲ್ಲ. ಕೆಲ ರಾಜಕೀಯ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯಗೆ ನೈತಿಕತೆಯಿಲ್ಲ

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ ಅಶಾಂತಿ ಸೃಷ್ಟಿಸುತ್ತಾರೆ. ಸಿಎಎ ಜಾರಿ ವೇಳೆಯು ಕಾಂಗ್ರೆಸ್ ನಿಂದ ಗಲಾಟೆ ಮಾಡಲಾಯಿತು. ಅಧಿಕಾರಕ್ಕಾಗಿ ಭಯೋತ್ಪಾದಕ ಕೃತ್ಯ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನೇಕ ರೈತರು ಸಾವನ್ನಪಿದ್ದು, ಸಿದ್ದುಗೆ ರೈತರ ಪರ ಮಾತನಾಡುವ ನೈತಿಕತೆಯಿಲ್ಲ. ಸಮಾಜವಾದದ ಹೆಸರಲ್ಲಿ ಮಜಾ ಮಾಡಿದವರು ಅವರು ಎಂದು ಟೀಕಿಸಿದರು.

ಡಿಕೆಶಿ ಶೀಘ್ರವೇ ಜೈಲಿಗೆFarmers,name,peasantry,Political,piracy,Dikeshi,Siddaramaiah,Kateelಮೆರವಣಿಗೆಯ ಮೂಲಕ ಜೈಲಿನಿಂದ ಬಂದ ಡಿಕೆಶಿ ಶೀಘ್ರವೇ ಜೈಲಿಗೆ ತೆರಳಲಿದ್ದು, ರಾಜಕೀಯ ಅಂತ್ಯ ಕಾಣಲಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

key words : Farmers-name-peasantry-Political-piracy-Dikeshi-Siddaramaiah-Kateel