Saturday, September 26, 2026

BDA Apartments

EXCLUSIVE : ಗ್ಯಾಂಗ್ ರೇಪಿಸ್ಟ್ ಗಳ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರ ತಂಡ ಇವರೇ ನೋ...
Home Crime EXCLUSIVE : ಗ್ಯಾಂಗ್ ರೇಪಿಸ್ಟ್ ಗಳ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರ ತಂಡ ಇವರೇ ನೋಡಿ..

EXCLUSIVE : ಗ್ಯಾಂಗ್ ರೇಪಿಸ್ಟ್ ಗಳ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರ ತಂಡ ಇವರೇ ನೋಡಿ..

 

ಮೈಸೂರು, ಆ.28, 2021 : (www.justkannada.in news) : ಗ್ಯಾಂಗ್ ರೇಪ್ ಪ್ರಕರಣವನ್ನು ಬೆನ್ನಟ್ಟಿ ಪತ್ತೆ ಹಚ್ಚಿದ ಮೈಸೂರು ಪೊಲೀಸರಿಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಖುದ್ದು ಗೃಹ ಸಚಿವರೇ ಪೊಲೀಸ್ ತಂಡಕ್ಕೆ ರಿವಾರ್ಡ್ ಘೋಷಿಸಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಶಹಬ್ಬಾಸ್ ಎಂದಿದ್ದಾರೆ.

ಘಟನೆ ನಡೆದು ಬೆಳಕಿಗೆ ಬಂದ ಕ್ಷಣದಿಂದಲೇ ಕಾರ್ಯೊನ್ಮುಖರಾದ ಮೈಸೂರು ಪೊಲೀಸರು, ಕಾಮುಕರನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಮೂರ್ನಾಲ್ಕು ದಿನ ಅವಿರತ ಶ್ರಮಿಸಿದ್ದಾರೆ. ಗ್ಯಾಂಗ್ ರೇಪ್ ನಡೆಸಿದ ಕಾಮುಕರ ಪತ್ತೆ ತಂಡದ ನೇತೃತ್ವ ವಹಿಸಿದ್ದ ಪೊಲೀಸರು ಇವರೇ ನೋಡಿ..

ತಂಡದ ನೇತೃತ್ವವಹಿಸಿದ್ದವರು ಎಸಿಪಿ ಶಿವಶಂಕರ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀಕಾಂತ್, ಮಹಾದೇವಸ್ವಾಮಿ, ಪ್ರಕಾಶ್, ಅಜರುದ್ದೀನ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಯಪ್ರಕಾಶ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳಾದ ಅನಿಲ್ ಮತ್ತು ಅಲೆಕ್ಸ್, ಹೆಡ್ ಕಾನ್ಸ್ಟೇಬಲ್ ರಮೇಶ್, ಕಾಂತರಾಜು ಭಗತ್, ಶರೀಫ್, ಮಹಾದೇವು, ರಾಜು ಹಾಗೂ ಪೊಲೀಸ್ ಕಾನ್ಸ್ಟೇಬಲ್ ಜೀವನ್, ಗಿರೀಶ್, ಸಾಗರ್ ಮತ್ತು ಸಿಬ್ಬಂದಿ ಮಂಜುನಾಥ್, ಕಿಶೋರ್. ಲತೀಫ್, ಮಂಜು.

Headed by
ACP Shivashankar , Pi Srikanth Pi Mahadevswamy, Pi prakash , Pi Azarudin , Psi Jayaprakash Asi Anil , Asi Alex , Hc Ramesh , PC Jeevan , Hc Kantharaj , Bhagat Hc , Sharif Hc , Girish PC , Sagar PC, Mahadev HC , Raju Hc , Manjunath , Kishore Latif.

key words : mysore-police-arrested-gangrapist-karnataka