3ನೇ ಟೆಸ್ಟ್ ಪಂದ್ಯ: ಇಂಗ್ಲೇಂಡ್ ವಿರುದ್ಧ ಭಾರತಕ್ಕೆ  ಇನ್ನಿಂಗ್ಸ್ ಮತ್ತು 76ರನ್ ಗಳಿಂದ ಸೋಲು.

ನವದೆಹಲಿ, ಆಗಸ್ಟ್,28,2021(www.justkannada.in): ಮೂರನೇ ಟೆಸ್ಟ್  ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 76ರನ್ ಗಳಿಂದ ಸೋಲನುಭವಿಸಿದೆ.

ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ  ಭಾರತ ಸೋಲನುಭವಿಸುವ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ಸಮಬಲಗೊಳಿಸಿದೆ.   ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್  ಮಾಡಿದ ಟೀಂ ಇಂಡಿಯಾ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ನಿಂದಾಗಿ 78 ರನ್ ಗೆ ಆಲೌಟ್ ಆಯಿತು.

ನಂತರ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 432 ರನ್ ಗಳಿಸಿ ಭಾರತದ ಮೇಲೆ 354 ರನ್ ಗಳ ಮುನ್ನಡೆ ಸಾಧಿಸಿತು. ಈ ಮುನ್ನಡೆಯ ಮುಂದೆ, ಭಾರತವು ಎರಡನೇ ಇನ್ನಿಂಗ್ಸ್‌ ನಲ್ಲಿ ಕೇವಲ 278 ರನ್ ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಕಳೆದುಕೊಂಡಿತು.

Key words: 3rd Test match- England – beat -India -innings and 76 runs