ಆದಿ ಚುಂಚನಗಿರಿ ಮಠದ ಶ್ರೀಗಳ ಪೋನ್ ಟ್ಯಾಪ್: ಆರ್.ಅಶೋಕ್ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟು

ಬೆಂಗಳೂರು, ಸೆಪ್ಟೆಂಬರ್ 30, 2019 (www.justkannada.in): ಆದಿ ಚುಂಚನಗಿರಿ ಮಠದ ಶ್ರೀಗಳ ಪೋನ್ ಕೂಡ ಟ್ಯಾಪ್ ಆಗಿದೆ ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಸಾರಾ ಮಹೇಶ್ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸಿಬಿಐ ತನಿಖೆ ಪೂರ್ಣಗೊಳ್ಳದೆ ಮಾಹಿತಿ ಹೇಗೆ ಸಿಕ್ತಿದೆ ಎಂದು ಆರ್ ಅಶೋಕ್ ಗೆ ಸಾರಾ ಮಹೇಶ್ ಪ್ರಶ್ನೆ ಮಾಡಿದ್ದಾರೆ. ಆರ್ ಅಶೋಕ್ ಒಂದು ರೀತಿ ಹೇಳಿಕೆ ಕೊಡ್ತಾರೆ. ಸಿಎಂ ಪುತ್ರ ವೀಜಯೇಂದ್ರ ವಿರುದ್ದವಾಗಿ ಮತ್ತೊಂದು ಹೇಳಕೆ ಕೊಡ್ತಾರೆ. ತನಿಖೆ ಪೂರ್ಣ ಆಗೋವರೆಗೆ ಸುಮ್ಮನಿರಿ. ಪದೇ ಪದೇ ನಮ್ಮ ನಾಯಕರ ವಿಚಾರದಲ್ಲಿ ರಾಜಕೀಯ ಮಾಡಲಾಗ್ತಿದೆ.

ಡಿಕೆಶಿ ಹೆಚ್.ಡಿ.ಕೆ ಸಂಬಂದ ಹಳಸಬೇಕು ಅನ್ನೋ ಪ್ರಯತ್ನ ಮಾಡಿದ್ರು. ಇಗಾ ಶ್ರೀಗಳ ವಿಚಾರದಲ್ಲಿ ಅದೇ ಷಡ್ಯಂತ್ರ ನಡೆಯುತ್ತಿದೆ. ಶ್ರೀಗಳು ಹಾಗೂ ದೊಡ್ಡಗೌಡರ ಸಂಬಂಧ ತುಂಬಾ ಚನ್ನಾಗಿದೆ. ಸರ್ಕಾರ ಕೆಡವಲು ಪ್ರಯತ್ನ ನಡೆಯುತ್ತಿದೆ ಅನ್ನೊ ವಿಚಾರ ಗೊತ್ತಿದ್ರು ಶ್ರೀಗಳ ಕಾರ್ಯಕ್ರಮಕ್ಕೆ ಅಮೇರಿಕಾಕ್ಕೆ ಹೊಗಿ ಮಾತು ಉಳಿಸಿಕೊಂಡಿದ್ರು ಕುಮಾರಸ್ವಾಮಿ ಎಂದು ಹೇಳಿದರು.