ಯಡಿಯೂರಪ್ಪ ರೆಕ್ಕೆಪುಕ್ಕ ಎಲ್ಲವನ್ನೂ ಕತ್ತರಿಸಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

ರಾಯಚೂರು, ಸೆಪ್ಟೆಂಬರ್ 30, 2019 (www.justkannada.in): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧಾ ಟೀಕಾ ಪ್ರಹಾರ ನಡೆಸಿದ್ದಾರೆ.

ತಂತಿ ಮೇಲೆ ನಡೆಯುವ ಅನಿವಾರ್ಯತೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕೊಡಲಿ. ಯಡಿಯೂರಪ್ಪ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ. ರೆಕ್ಕೆಪುಕ್ಕ ಎಲ್ಲವನ್ನೂ ಕತ್ತರಿಸಿದ್ದಾರೆ ಎಂದು ಕುಹಕವಾಡಿದರು.

ಯಡಿಯೂರಪ್ಪ ಅಶಕ್ತ ಮುಖ್ಯಮಂತ್ರಿ. ಪ್ರವಾಹ, ನೆರೆ ಬಂದು 50 ದಿನಗಳಾದರೂ ಮನೆ ಬಿದ್ದವರಿಗೆ ಪರಿಹಾರ ಕೊಡಿಸಿಲ್ಲ. ನಮ್ಮದು ಸಮಗ್ರ ಕರ್ನಾಟಕ ಪರಿಕಲ್ಪನೆ ಇತ್ತು. ಯಡಿಯೂರಪ್ಪ ತಮ್ಮ ಪಕ್ಷ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.