Saturday, September 19, 2026

BDA Apartments

Home Front Page ಹೆಚ್,ಡಿಕೆ ಸಿಎಂ ಆಗಿದ್ದಾಗ  ಎಲ್ಲರ ಫೋನ್ ಟ್ಯಾಪಿಂಗ್ ಆಗಿದೆ: ಸಿಬಿಐ ತನಿಖೆಗೆ ಒತ್ತಾಯಿಸಿದ ಬಿಜೆಪಿ ಶಾಸಕ...

ಹೆಚ್,ಡಿಕೆ ಸಿಎಂ ಆಗಿದ್ದಾಗ  ಎಲ್ಲರ ಫೋನ್ ಟ್ಯಾಪಿಂಗ್ ಆಗಿದೆ: ಸಿಬಿಐ ತನಿಖೆಗೆ ಒತ್ತಾಯಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ..

ದಾವಣಗೆರೆ, ಆ,14,2019(www.justkannada.in): ಹೆಚ್,ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಎಲ್ಲರ ಫೋನ್ ಟ್ಯಾಪಿಂಗ್ ಆಗಿದೆ. ನನ್ನ ಫೋನ್ ಸಹ ಟ್ಯಾಪ್ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಫೋನ್ ಕದ್ಧಾಲಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ, “ಮೈತ್ರಿ ಸರ್ಕಾರದ ಆಡಳಿತವಿದ್ದಾಗ ನನ್ನ ಫೋನನ್ನೂ ಟ್ಯಾಪ್ ಮಾಡಿದ್ದರು. “ಕುಮಾರಸ್ವಾಮಿ ನನ್ನ ಹಾಗೂ ಹಲವರ ಫೋನ್ ಟ್ರ್ಯಾಪ್ ಮಾಡಿದ್ದಾರೆ. ಸಿದ್ದರಾಮಯ್ಯ ಫೋನ್ ಸಹ ಟ್ಯಾಪ್ ಆಗಿದೆ” ಎಂದು ಆರೋಪಿಸಿದ್ದಾರೆ.

ಫೋನ್ ಟ್ಯಾಪಿಂಗ್ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುತ್ತೇವೆ. ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸುತ್ತೇವೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ರೇಣುಕಾಚಾರ್ಯ ತಿಳಿಸಿದರು.ಹಾಗೆಯೇ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದು ತಿಳಿಸಿದರು.

Key words: everyone -phone is tapping –HD Kumaraswamy- CM-  BJP MLA -Renukacharya