ಬೆಂಗಳೂರು,ಫೆಬ್ರವರಿ,7,2023(www.justkannada.in): ಪ್ರಹ್ಲಾದ್ ಜೋಶಿಯನ್ನ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸುತ್ತಿದೆ ಎಂದು ಹೇಳಿಕೆ ನೀಡಿದ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಜೆಡಿಎಸ್ ನಲ್ಲಿ ಕುಮಾರಸ್ವಾಮಿಗೆ ಮಾತ್ರ ಸಿಎಂ ಆಗುತ್ತಾರೆ. ಆದರೆ ಬಿಜೆಪಿಯಲ್ಲಿ ಸಿಎಂ ಆಗಲು ಎಲ್ಲರೂ ಅರ್ಹರು ಎಂದು ತಿರುಗೇಟು ನೀಡಿದ್ದಾರೆ.![]()
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಹೆಚ್.ಡಿ ಕುಮಾರಸ್ವಾಮಿ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅವರು ಕ್ಷಮೆ ಕೇಳಬೇಕು ಪ್ರಹ್ಲಾದ್ ಜೋಶಿ ಹೆಸರೇಳಿ ಒಂದು ಸಮುದಾಯ ಟಾರ್ಗೆಟ್ ಮಾಡಿದ್ದಾರೆ. ಮತವಿಭಜನೆಯ ಅವರ ತಂತ್ರ ನಡೆಯಲ್ಲ ನಮಗೆ ಮತ ವಿಭಜನೆಯ ಯಾವುದೇ ಭಯವಿಲ್ಲ ನಮ್ಮದು ಜಾತಿ ಆಧಾರಿತ ಪಕ್ಷವಲ್ಲ ಎಂದರು. 
ಕುಮಾರಸ್ವಾಮಿ ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ ಪ್ರತಿ ಕನ್ನಡಿಗನಿಗೂ ಸಿಎಂ ಆಗುವ ಅವಕಾಶ ವಿರುತ್ತದೆ. ಬಿಜೆಪಿಯಲ್ಲಿ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
Key words: Everyone – eligible – become- CM – BJP-Minister -Ashwath Narayan







