Sunday, September 13, 2026

BDA Apartments

ಕೆಪಿಎಸ್ ಸಿ ಅಕ್ರಮ ಆರೋಪ: ವರದಿ ಕೇಳಿದ ಸಿಎಸ್ ಶಾಲಿನಿ ರಜನೀಶ್ BDA JK_Adv BDA Adv
Home Front Page ಕೆಪಿಎಸ್ ಸಿ ಅಕ್ರಮ ಆರೋಪ: ವರದಿ ಕೇಳಿದ ಸಿಎಸ್ ಶಾಲಿನಿ ರಜನೀಶ್

ಕೆಪಿಎಸ್ ಸಿ ಅಕ್ರಮ ಆರೋಪ: ವರದಿ ಕೇಳಿದ ಸಿಎಸ್ ಶಾಲಿನಿ ರಜನೀಶ್

ಬೆಂಗಳೂರು,ಮಾರ್ಚ್,4,2026 (www.justkannada.in):  ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಕೆಪಿಎಸ್ ಸಿ ವಿರುದ್ದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವರದಿ ಕೇಳಿದ್ದಾರೆ.

ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ ಒಂದೇ ಕುಟುಂಬದವರು ಆಯ್ಕೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವರದಿ ನೀಡುವಂತೆ ಸಿಎಸ್ ಶಾಲನಿ ರಜನೀಶ್ ಸೂಚಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ವರದಿ: ಕೆಪಿಎಸ್ ಸಿ ಕಾರ್ಯದರ್ಶಿ

ಆರೋಪ ಕುರಿತು ಪ್ರತಿಕ್ರಿಯಿಸಿರುವ  ಕೆಪಿಎಸ್ ಕಾರ್ಯದರ್ಶಿ ಜ್ಯೋತಿ ಅವರು,  ಕೆಎಎಸ್ ಫಲಿತಾಂಶದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ಫಲಿತಾಂಶ ಬಿಡುಗಡೆ ಆಗಿದೆ. ಅಧಾರ ಇಲ್ಲದೇ ಭ್ರಷ್ಟಾಚಾರ ಆರೋಪ ಸರಿಯಲ್ಲ. ಈ ವಿಚಾರದ ಬಗ್ಗೆ ಸಿಎಸ್ ಶಾಲಿನಿ ರಜನೀಶ್ ವರದಿ ಕೇಳಿದ್ದಾರೆ. ಇನ್ನೆರಡು ದಿನದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Key words: KPSC,  allegations, CS Shalini Rajneesh, report